ಹಾವೇರಿ ಚಾತುರ್ಮಾಸ ಕಲಶ ಸ್ಥಾಪನೆ ಜು.20ರಂದು

Published on

ಹಾವೇರಿ: ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗಾರ ಮಹಾರಾಜರ ಚಾತುರ್ಮಾಸ ಕಲಶ ಸ್ಥಾಪನೆ ಜು.20ರಂದು ಮಧ್ಯಾಹ್ನ 1 ಗಂಟೆಗೆ ನಗರದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.

ವರ್ಷಾಯೋಗ ಆಚರಿಸಲು ಆಗಮಿಸಿರುವ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗಾರ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದು, ಸದಲಗಾದ ಮಾಣಿಕ ಶ್ರೀಪಾಲ ಚಂದಗಡೆ ಹಾಗೂ ಪ್ರತಿಮಾಧಾರಿ ಬಾಲಬ್ರಹ್ಮಚಾರಿ ಶ್ರೀ ಮಹಾವೀರ ಭಯ್ಯಜಿ ಭಾಗವಹಿಸುವರು. ಶಾಸಕ ರುದ್ರಪ್ಪ ಲಮಾಣಿ ಉದ್ಘಾಟಿಸಸಿದ್ದು, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ಗಡ್ಡಿಗೌರ, ಹಾವೇರಿ ಭಗವಾನ್ ಶ್ರೀ 1008 ನೇಮಿನಾಥ ದಿಗಬಂದ ಜೈನ್ ಮಂದಿರ ಕಮಿಟಿ ಅಧ್ಯಕ್ಷ ಚಂದ್ರನಾಥ ಕಳಸೂರ ಇತರರು ಭಾಗವಹಿಸುವರು.

ಹಾವೇರಿ ಶ್ರೀ 1008 ಆದಿನಾಥ ಮೂರ್ತಿಪೂಜಕ ಶ್ವೇತಾಂಬರ ಸಂಘದ ಅಧ್ಯಕ್ಷ ಭರತ ಜೈನ್, ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಡಾ.ನಿರಜಾ ನಾಗೇಂದ್ರಕುಮಾರ, ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎ.ವಜ್ರಕುಮಾರ, ಭರತರಾಜ ಹಜಾರಿ, ಮಹಾವೀರ ಕಳಸೂರ, ನವೀನ ಜಗಶೆಟ್ಟಿ, ಮಂಜಪ್ಪ ತಡಸದ, ಪುಷ್ಪಾ ಕಳಸೂರ, ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಉಗಾರ ಬದ್ರುಕನ ಅಭಯ ಹವಲೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net