ಜಿನಭಜನಾ ಸ್ಪರ್ಧೆ 9ರಂದು

Published on

ಹಾವೇರಿ: ಭಾರತೀಯ ಜೈನ ಮಿಲನ್ ವಲಯ-8 ದಾವಣಗೆರೆ ವಿಭಾಗದ ಜಿನ ಭಜನಾ ಕಾರ್ಯಕ್ರಮವನ್ನು ನ.9ರಂದು ಬೆಳಗ್ಗೆ 9 ಗಂಟೆಗೆ ನಗರದ ಶಿವಶಕ್ತಿ ಫ್ಯಾಲೇಸ್‌ನಲ್ಲಿ ಆಯೋಜಿಸಲಾಗಿದೆ.

ಧರ್ಮಸ್ಥಳದ ಸುರೇಂದ್ರಕುಮಾರ ಮಾರ್ಗದರ್ಶನದಲ್ಲಿ ಅನಿತಾ ಸುರೇಂದ್ರಕುಮಾರ ಪರಿಕಲ್ಪನೆಯಲ್ಲಿ ನಡೆಯಲಿರುವ ಜಿನಭಜನಾ ಸ್ಪರ್ಧೆಯ 9ನೇ ಆವೃತ್ತಿಯ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net