ಹಾವೇರಿ ಜೈನ ಮಂದಿರದಲ್ಲಿ ಭಗವಾನ್ 1008 ಪಾರ್ಶ್ವನಾಥ ತೀಥರ್ಂಕರರ ಮೋಕ್ಷ ಕಲ್ಯಾಣ ಪೂಜೆ

31 HVR 6
Published on

ಹಾವೇರಿ: ನಗರದ ಭಗವಾನ್ ಶ್ರೀ 1008 ನೇಮಿನಾಥ ಸ್ವಾಮಿ ದಿಗಂಬರ ಜೈನ ಮಂದಿರದಲ್ಲಿ ಗುರುವಾರ ಮುಕುಟ ಸಪ್ತಮಿ ಅಂಗವಾಗಿ ಭಗವಾನ್ 1008 ಪಾರ್ಶ್ವನಾಥ ತೀಥರ್ಂಕರರ ಮೋಕ್ಷ ಕಲ್ಯಾಣ ಪೂಜೆ ಜರುಗಿತು. ಚರ್ಯಾ ಶಿರೋಮಣಿ ಮುನಿಶ್ರೀ 108 ವಿದಿತ ಸಾಗರಜಿ ಮಹಾರಾಜರ ನೇತೃತ್ವದಲ್ಲಿ ನಿರ್ವಾಣ ಲಾಡು ಸಮರ್ಪಣೆ ಮತ್ತು ವಿಶೇಷ ಅಭಿಷೇಕ ಶಾಂತಿಧಾರೆ ಪೂಜೆ ನೆರವೇರಿತು. ಶ್ರಾವಕ ಮತ್ತು ಶ್ರಾವಕಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net