ಇನ್ನರ್‌ವ್ಹೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ; ಅಧ್ಯಕ್ಷೆಯಾಗಿ ಪ್ರತಿಭಾ ಹಾವನೂರ ಆಯ್ಕೆ

27 HVR 3
Published on

ಹಾವೇರಿ: ಇನ್ನರ್ ವ್ಹೀಲ್ ಕ್ಲಬ್‌ನ ಹಾವೇರಿ ಶಾಖೆಯ ನೂತನ ಅಧ್ಯಕ್ಷರಾಗಿ ಪ್ರತಿಭಾ ಹಾವನೂರ ಆಯ್ಕೆಯಾಗಿದ್ದಾರೆ.
ನಗರದ ರಜನಿ ಸಭಾ ಭವನದಲ್ಲಿ ಇತ್ತೀಚೆಗೆ ಕ್ಲಬ್‌ನ ಜಿಲ್ಲಾ ಕಾರ್ಯದರ್ಶಿ ವಿರಾಜ್ ಕೋಟಕ್ ನೇತೃತ್ವದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಭಾರಂಭದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ತೇಜಶ್ರೀ ಸುರಳಿಹಳ್ಳಿ, ಖಜಾಂಚಿಯಾಗಿ ಶಿಲ್ಪಾ ಚುರ್ಚಿಹಾಳ ಅಧಿಕಾರ ವಹಿಸಿಕೊಂಡರು. ವಿರಾಜ್ ಕೋಟಕ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಂಜುನಾಥ ಉಪ್ಪಾರ, ಡಾ.ಆನಂದ ನೀರಲಗಿ, ಇತರರು ಪಾಲ್ಗೊಂಡಿದ್ದರು. ಸುಜಿತ ಜೈನ್ ಸ್ವಾಗತಿಸಿದರು, ದಯಾನಂದ ಯಡ್ರಾಮಿ ಹಾಗೂ ವಜ್ರಕುಮಾರ ನಿರೂಪಿಸಿದರು. ರಾಜು ಲಿಗಾಡೆ ವಂದಿಸಿದರು.
ರೋಟರಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಂದ್ರಾಳ ಆಯ್ಕೆ
ರೊ.ಅವಿನಾಶ ಪೋತದಾರ ನೇತೃತ್ವದಲ್ಲಿ ರೋಟರಿ ಕ್ಲಬ್ ಹಾಗೂ ರೋಟ್ರ್ಯಾಕ್ಟ ಕ್ಲಬ್‌ಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷರಾಗಿ ರೊ.ಮಲ್ಲಿಕಾರ್ಜುನ ಹಂದ್ರಾಳ, ಕಾರ್ಯದರ್ಶಿಯಾಗಿ ರೊ.ರಾಜು ಲಿಗಾಡೆ ಆಯ್ಕೆಯಾದರು. ರೋಟ್ರ್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ವಿನಯ ಶಿರೂರ ಹಾಗೂ ಕಾರ್ಯದರ್ಶಿಯಾಗಿ ನಿಶಾಂತ ಮಾಗಾವಿ ಅಧಿಕಾರ ವಹಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net