ಇನ್ನರ್‌ವ್ಹೀಲ್ ಕ್ಲಬ್‌ನಿಂದ 8 ಶಿಕ್ಷಕರಿಗೆ ಪ್ರಶಸ್ತಿ

5 HVR 3
Published on

ಹಾವೇರಿ: ಇನ್ನರ್ ವ್ಹೀಲ್ ಕ್ಲಬ್‌ನಿಂದ ನಗರದ ರೋಟರಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಜಿಲ್ಲೆಯ 8 ಶಿಕ್ಷಕರಿಗೆ ‘ಇನ್ನರ್ ವ್ಹೀಲ್ ಎಜಿಕೇಶನಿಸ್ಟ್ ಅವಾರ್ಡ್’ ನೀಡಿ ಗೌರವಿಸಲಾಯಿತು.
ನಿವೃತ್ತ ಶಿಕ್ಷಕಿ ಲತಾ ಹಳಕೊಪ್ಪ ಮಾತನಾಡಿ, ಜಗತ್ತಿನಲ್ಲಿ ಬದಲಾವಣೆಗೆ ಬದಲಾಯಿಸಬಹುದಾದ ಅತ್ಯಂತ ಶಕ್ತಿಶಾಲಿ ಆಯುಧ ಎಂದರೆ ಶಿಕ್ಷಣ ಎಂದರು.
ಕ್ಲಬ್‌ನ ಅಧ್ಯಕ್ಷೆ ಪ್ರತಿಭಾ ಹಾವನೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿರಾಜ್ ಕೋಟಕ್, ಕಾರ್ಯದರ್ಶಿ ತೇಜಶ್ರೀ ಸುರಳಿಹಳ್ಳಿ, ವನಿತಾ ಮಾಗನೂರ, ಶಿಲ್ಪಾ ಚುರ್ಚಿಹಾಳ, ಶೋಭಾ ತಾಂಡೂರ, ರೇಷ್ಮಾ ಮುಷ್ಠಿ, ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net