

ಹಾವೇರಿ: ಇಲ್ಲಿನ ಆದಾಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಬುಧವಾರ 165ನೇ ಆದಾಯ ತೆರಿಗೆ ದಿನವನ್ನು ಆಚರಣೆ ಮಾಡಲಾಯಿತು.
ಸಮಾರಂಭದಲ್ಲಿ ಆದಾಯ ತೆರಿಗೆ ಅಧಿಕಾರಿ ಎಂ.ಎ.ಖತೀಬ್ ಅವರನ್ನು ಸನ್ಮಾನಿಸಲಾಯಿತು. ಚಾರ್ಟರ್ಡ್ ಅಕೌಂಟಂಟ್‌ಗಳ ಕುರಿತು ಹಲವರು ಮಾತನಾಡಿದರು.
ಹಾವೇರಿ ಜಿಲ್ಲಾ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಬಿ.ಪಿ.ಪಾಟೀಲ, ಉಪಾಧ್ಯಕ್ಷ ಸಿಎ ಕಾಶೀನಾಥ ಪವಾರ, ಕಾರ್ಯದರ್ಶಿ ಸಿಎ ವೈಭವ ವಾಳ್ವೇಕರ, ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಶಿವಪ್ಪ ಗುರಿಕಾರ, ಹಾವೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರವಿ ಮೆಣಸಿನಕಾಯಿ, ಚಂದ್ರಣ್ಣ ಪಟ್ಟಣಶೆಟ್ಟಿ, ಆರ್.ಸಿ.ಪಾಟೀಲ, ಸಿಎ ಬಸವರಾಜ ಮತ್ತೂರ, ಸಿಎ ಸಚಿನ ಪಾಟೀಲ, ಸಿಎ ಕಿರಣ ಗೋಕಾವಿ, ಸಿಎ ವಿನಾಯಕ ಅಟವಾಳಗಿ, ಸಿಎ ಅಕ್ಷಯ ದೊಡ್ಡಗೌಡರ, ಇತರರು ಇದ್ದರು.