ಆದರ್ಶ ಮಾರ್ಗದಲ್ಲಿ ನಡೆದರೆ ಸಾರ್ಥಕತೆ; ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ

23 HVR 7
Published on

ಹಾವೇರಿ: ಶ್ರಾವಣ ಮಾಸದ ಪ್ರವಚನ ಎಂದರೆ, ಮಹಾತ್ಮರ ಸ್ಮರಣೆ ಮಾತ್ರವಲ್ಲ. ಅವರಂತೆ ಆದರ್ಶ ಮಾರ್ಗದಲ್ಲಿ ನಡೆದು ಸಮಾಜಮುಖಿ ಕಾರ್ಯವನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ಮರಣೆ ಸಾರ್ಥಕವಾಗುತ್ತದೆ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಗದುಗಿನ ಪುಟ್ಟರಾಜ ಗವಾಯಿ ವಿರಚಿತ ಹಾನಗಲ್ಲ ಲಿಂ. ಸದಾಶಿವ ಸ್ವಾಮೀಜಿ ಪುರಾಣ ಪ್ರವಚನದ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಂಗಳವಾರ ಮಾತನಾಡಿದರು.
ಹಾನಗಲ್ಲ ಲಿಂ.ಸದಾಶಿವ ಶ್ರೀಗಳು ತಮ್ಮ ಆಯಷ್ಯವನ್ನು ಶಿವಯೋಗ ಮಂದಿರದ ಉನ್ನತಿಗಾಗಿ ಮೀಸಲಿಟ್ಟಿದ್ದರು. ಅವರ ನಿಸ್ವಾರ್ಥ ಸೇವೆಯೇ ಇಂದಿನ ಮಠಮಾನ್ಯಗಳಲ್ಲಿ ಪ್ರಜ್ವಲಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಯನಾಳ ವಿರಕ್ತ ಮಠದ ಶ್ರೀ ಅಭಿನವ ರೇವಣಸಿದ್ಧ ಸ್ವಾಮೀಜಿ ಮಾತನಾಡಿ, ಭಾರತ ಅಧ್ಯಾತ್ಮದ ನೆಲೆವೀಡು. ಇಲ್ಲಿನ ಪ್ರತಿಯೊಂದು ಆಚರಣೆಗೆ ವೈಜ್ಞಾನಿಕ ಹಿನ್ನೆಲೆ ಇದೆ. ಶ್ರಾವಣ ಮಾಸದ ಆಚರಣೆಯಲ್ಲಿ ಮಹಾತ್ಮರ ನೆನದು ಅವರ ತಪಸ್ಸು, ವಿನಯ, ಕಲ್ಯಾಣ ಗುಣಗಳ ಮೂಲಕ ಸಾಧನೆ ಮಾಡಿದ ಮಹಾನ್ ಚೇತನಗಳ ಜೀವನ ಚರಿತ್ರೆಯ ಅವಲೋಕನವು ಕತ್ತಲು ಕವಿದ ನಮ್ಮ ಬೆಳಕಿಗೆ ದಾರಿದೀಪವಾಗುತ್ತದೆ. ಆದ್ದರಿಂದ ಶ್ರಾವಣ ಮಾಸವು ಭಾರತೀಯನಿಗೆ ಪವಿತ್ರ ಮಾಸವಾಗಿದೆ ಎಂದರು.
ಶಿವಮೂರ್ತಿಶಾಸ್ತ್ರಿ ಹಿರೇಮಠ ಪ್ರವಚನ ಪ್ರಸ್ತುತ ಪಡಿಸಿದರು. ಹೆಸ್ಕಾಂ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಮುದಕಣ್ಣನವರ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಹಡಗಲಿ ವಚನ ಸಂಗೀತ ಪ್ರಸ್ತುತ ಪಡಿಸಿದರು.
ಸಮಾರಂಭದಲ್ಲಿ ಸಾಹಿತಿ ಸತೀಶ ಕುಲಕರ್ಣಿ, ವೀರಣ್ಣ ವಳಸಂಗದ, ಶಿವಯೋಗೆಪ್ಪ ಐರಣಿ, ಎಸ್.ಎಂ.ಹಾಲಯ್ಯನವರಮಠ, ಬಿ. ಬಸವರಾಜ, ಶಿವಯೋಗಿ ವಾಲಿಶೆಟ್ಟರ, ಎಂ.ಸಿ. ಮಳಿಮಠ, ತಮ್ಮಣ್ಣ ಮುದ್ದಿ, ಜೆ.ಬಿ. ಸಾವಿರಮಠ. ಸಿ.ಜಿ. ತೋಟಣ್ಣನವರ, ಜಗದೀಶ ತುಪ್ಪದ, ಗಣೇಶಪ್ಪ ಹೂಗಾರ, ರಾಚಪ್ಪ ಮಾಗನೂರ, ನಾಗಪ್ಪ ಮುರನಾಳ, ರಾಚಪ್ಪ ಲಂಬಿ, ಶಿವಬಸಯ್ಯ ವಿರಕ್ತಮಠ, ಶಿವರಾಜ ವಳಸಂಗದ, ಶಿವಣ್ಣ ಶಿರೂರ, ಮಹಾಂತೇಶ ಕಲಬುರ್ಗಿ, ಮಹಾಂತೇಶ ಹಿರೇಮಠ, ಶಿವಲಿಂಗಯ್ಯ ಮಠಪತಿ, ರವಿ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.
ಕಲಾವಿದ ಶಿವಕುಮಾರ ಹಡಗಲಿ ಪ್ರಾರ್ಥಿಸಿದರು. ನಾಗರಾಜ ನಡುವಿನಮಠ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ನಿರೂಪಿಸಿದರು. ಎಸ್.ಎನ್.ಮಳೆಪ್ಪನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net