

ಹಾವೇರಿ: ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬುಧವಾರ ಹಾವೇರಿಗೆ ಆಗಮಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರನ್ನು ಮಹಾಸಭಾ ಜಿಲ್ಲಾ, ತಾಲೂಕು ಘಟಕದಿಂದ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್, ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಶಂಬು ಚಕ್ಕಡಿ, ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ಬುಕ್ಕಶೆಟ್ಟಿ, ಈರಣ್ಣ ಕೆಂಚಮಲ್ಲ, ಅನುಸೂಯಾ ಎರವಿನತೆಲಿ, ಅಜ್ಜಪ್ಪ ಗೌಡಪ್ಪಗೌಡರ, ಜ್ಯೋತಿ ಬಶೆಟ್ಟಿಯವರ, ನೀಲಮ್ಮ ನಿಂಬರಗಿ, ದೀಪಾ ಹಲಗಣ್ಣನವರ, ಇತರರಿದ್ದರು.