ಹೊಸರಿತ್ತಿಯಲ್ಲಿ ಮಧ್ಯರಾತ್ರಿ ಧ್ವಜಾರೋಹಣ

Hosaritti
Published on

ಹಾವೇರಿ: ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ಸ್ವಾತಂತ್ರೊೃೀತ್ಸವದ ಅಂಗವಾಗಿ ಮಂಗಳವಾರ ಸೋಮವಾರ ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ಹಾಗೂ ದೇಶ ವಿಭಜನೆಯ ದುರಂತಕತೆ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮ ಜರುಗಿತು.
ಗ್ರಾಮದಲ್ಲಿ ಮೊದಲು ಮೆರವಣಿಗೆ ಮೂಲಕ ಕಾರ್ಯಕ್ರಮ ಆರಂಭವಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇಶಭಕ್ತಿ ಗೀತೆಗಳೊಂದಿಗೆ ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರಗಳೊಂದಿಗೆ ಮೆರವಣಿಗೆ ಸಾಗಿತು. ಸ್ವಾತಂತ್ರ್ಯ ಯೋಧರ ಸಮುದಾಯ ಭವನದ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು.
ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಸುಭಾಸಸಿಂಗ್ ಜಮಾದಾರ ಮಾತನಾಡಿ, ಭಾರತ ಸ್ವಾತಂತ್ರ ಪಡೆದುಕೊಂಡ ರೀತಿ ಮತ್ತು ಭಾರತಕ್ಕೆ ಸ್ವತಂತ್ರ ಕೊಡಲು ಬ್ರಿಟೀಷರು ಭಾರತದ ಭೂಭಾಗವನ್ನು ತುಂಡರಿಸಿ ಹಿಂದೂಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎಂದು ವಿಭಜಿಸಿದ್ದರ ಕುರಿತು ಉಪನ್ಯಾಸ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಲಕ್ಷಾಂತರ ಜನರ ರಕ್ತದಿಂದ ಬರೆಯಲ್ಪಟ್ಟ ವಿಜಯ ಚರಿತ್ರೆಯಾಗಿದೆ. ಭಗತ ಸಿಂಗ್, ರಾಜಗುರು, ಸುಖದೇವ, ಮೈಲಾರ ಮಹಾದೇವಪ್ಪ ವೀರಯ್ಯ ಹಿರೇಮಠ, ತಿರುಕಪ್ಪ ಮಡಿವಾಳರ, ಮೆಣಸಿನಹಾಳ ತಿಮ್ಮೇಗೌಡ ಅವರಂಥ ಅನೇಕ ಹೋರಾಟಗಾರರು ಮಹಾತ್ಮಾ ಗಾಂಧೀಜಿ ಹಾಗೂ ವೀರ ಸಾವರ್ಕರ ಅವರ ಮಾರ್ಗದರ್ಶನದೊಂದಿಗೆ ಶಾಂತಿ ಮತ್ತು ಕ್ರಾಂತಿಯ ಮಾರ್ಗದಲ್ಲಿ ಹೋರಾಡಿದರ ಪ್ರತಿಫಲವಾಗಿ ಇಂದು ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದರು.
ಶ್ರೀ ಗುದ್ದಲಿಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುತಾತ್ಮರಾದ ಮೈಲಾರ ಮಾದೇವಪ್ಪ, ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಹಾಗೂ ನಿವೃತ್ತ ಯೋಧ ಕೆ.ಸಿ ಕೋರಿ, ಚಂದ್ರಗಿರಿ ಗೋಪಾಳಿ, ಗವಿಸಿದ್ದಪ್ಪ ದ್ಯಾಮಣ್ಣವರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ಭರಡಿ, ಬಸವರಾಜ ಮಠಪತಿ, ನಿವೃತ ಪಾಚಾರ್ಯ ಎಚ್.ಆರ್ ಯಡಹಳ್ಳಿ, ಐ.ಜಿ ಕೋರಿ, ಗಿರೀಶ ಅಂಕಲಕೋಟಿ, ಮಹೇಶ ಪಟ್ಟಣಶೆಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net