ಗುರುಕುಲಕ್ಕೆ ಆಕಳು ದಾನ ನೀಡಿದ ಜಿತೇಂದ್ರ ಮಜೇಥಿಯಾ

Majethia
Published on

ಹಾವೇರಿ: ಹುಬ್ಬಳ್ಳಿಯ ಖ್ಯಾತ ಉದ್ಯಮಿ ಜಿತೇಂದ್ರ ಮಜೇಥಿಯಾ ಅವರು ಹಾವೇರಿ ತಾಲೂಕು ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಇತ್ತೀಚೆಗೆ ಎರಡು ಆಕಳುಗಳನ್ನು ದಾನವಾಗಿ ನೀಡಿದರು. ಶಾಲೆಯ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ಧಿಗೆ ಈ ಆಕಳುಗಳು ವರದಾನವಾಗಲಿವೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಕೃತಜ್ಞತೆ ತಿಳಿಸಿದೆ. ಈ ಸಂದರ್ಭದಲ್ಲಿ ಗುರುಕುಲದ ಪ್ರಧಾನ ಧರ್ಮದರ್ಶಿ ರಾಜೇಂದ್ರ ಪ್ರಸಾದ ಹಳ್ಳಿಕೇರಿ, ಹಿರಿಯ ಧರ್ಮದರ್ಶಿ ವೀರಣ್ಣ ಚಕ್ಕಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net