ಹೊಸರಿತ್ತಿ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜ್ ಶೇ.100ರಷ್ಟು ಸಾಧನೆ

Published on

ಹಾವೇರಿ: ತಾಲೂಕಿನ ಹೊಸರಿತ್ತಿ ಗ್ರಾಮದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಗುದ್ಲೆಪ್ಪ ಹಳ್ಳಿಕೇರಿ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯ ಬಿಎ, ಬಿಕಾಂ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ನಡೆಸಿದ ಪ್ರಸಕ್ತ ವರ್ಷದ ಅಂತಿಮ ವರ್ಷದ ಆರನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿದ್ದ ಕಾಲೇಜ್‌ನ ಕಲಾ ವಿಭಾಗದ 39 ಹಾಗೂ ವಾಣಿಜ್ಯ ವಿಭಾಗದ 21 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಆಲದಮ್ಮ ಚೂರಿ (ಪ್ರಥಮ), ಪುಟ್ಟಪ್ಪ ಕುರುಬರ ಹಾಗೂ ನಿರ್ಮಲಾ ಮಾಳಾಪುರ (ದ್ವಿತೀಯ), ಸವಿತಾ ಕಜ್ಜರಿ (ತೃತೀಯ), ವಾಣಿಜ್ಯ ವಿಭಾಗದಲ್ಲಿ ಕವಿತಾ ವಡ್ನಿಕೊಪ್ಪ (ಪ್ರಥಮ), ಅಕ್ಷತಾ ರಿತ್ತಿ (ದ್ವಿತೀಯ) ಹಾಗೂ ಸುಮತಿ ಬೂದಿಹಾಳ ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಮಿತಿಯ ಅಧ್ಯಕ್ಷ ರಾಜೇಂದ್ರಪ್ರಸಾದ ಹಳ್ಳಿಕೇರಿ, ಉಪಾಧ್ಯಕ್ಷರಾದ ಡಾ.ಗುದ್ಲೇಶ ಹಳ್ಳಿಕೇರಿ, ದಯಾನಂದ ಕಲಕೋಟಿ, ಕಾರ್ಯಾಧ್ಯಕ್ಷ ರಮೇಶ ಏಕಬೋಟೆ, ಉಪಕಾರ್ಯಾಧ್ಯಕ್ಷ ಗಿರೀಶ ಅಂಕಲಕೋಟೆ, ಕಾರ್ಯದರ್ಶಿಗಳಾದ ಚಂದ್ರಶೇಖರ ಅರಳಿಹಳ್ಳಿ, ವೀರಣ್ಣ ಚಕ್ಕಿ ಹಾಗೂ ಕಾರ್ಯಕಾರಿ ಮಂಡಳಿ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಸೊಬರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net