

ಹಾವೇರಿ: ರಾಣೆಬೆನ್ನೂರಿನ ಡಾ.ಸಂಜೀವ ಮುದ್ರಿ ಆಸ್ಪತ್ರೆ, ಹೊಸರಿತ್ತಿಯ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಗುರು ಗುದ್ದಲಿಶ್ವರ ಸ್ವಾಮೀಜಿ ಮಠದ ಸಹಯೋಗದಲ್ಲಿ ಹೊಸರಿತ್ತಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಉದ್ಘಾಟಿಸಿದರು.
ಡಾ.ಸಂಜೀವ ಮುದ್ರಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮೊಣಕಾಲು ಚಿಪ್ಪು ಬದಲಾವಣೆ, ಸೊಂಟ ನೋವು, ಬೆನ್ನು ನೋವಿನ ಶಸ್ತ್ರ ಚಿಕಿತ್ಸೆ ಕುರಿತು ವಿವರಿಸಿದರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ತಪಾಸಣೆಗೆ ಒಳಗಾದರು.
ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಚನ್ನಪ್ಪ ಹಳ್ಳಿಕೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ಭರಡಿ, ಕೆ.ಸಿ.ಕೋರಿ, ಮುತ್ತಣ್ಣ ಮಠದ, ಬಸಣ್ಣ ಮಠಪತಿ, ಶೇಖಣ್ಣ ಗಾಣಿಗೇರ ಸುರೇಶ ಇಟಗಿ, ಜಿಯಾವುದ್ದೀನ್ ಮಕಂದರ, ನರೇಶ ಮಂತಟ್ಟಿ, ಜಗದೀಶ ಬಾರ್ಕಿ, ಮೃತ್ಯುಂಜಯ ಕಲಕೋಟಿ, ಕಿರಣಕುಮಾರ ಕಲಕೋಟಿ, ಇತರರು ಉಪಸ್ಥಿತರಿದ್ದರು.