ಹೊಸಮಠದಲ್ಲಿ ವಚನ ಸಾಹಿತ್ಯ ಪಲ್ಲಕ್ಕಿ ಉತ್ಸವ

7 HVR 8
Published on

ಹಾವೇರಿ: ನಗರದ ಹೊಸಮಠದಲ್ಲಿ ಶನಿವಾರ ಮುರುೇಂದ್ರ ಮಹಾಶಿವಯೋಗಿಗಳ ಜಯಂತಿ ಪ್ರಯುಕ್ತ ವಚನ ಸಾಹಿತ್ಯ ಪಲ್ಲಕ್ಕಿ ಉತ್ಸವ ಜರುಗಿತು. ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಿತು.
ಹೊಸಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಸಮಾನತೆಗಾಗಿ ಬಸವಣ್ಣನವರು ಇಷ್ಟಲಿಂಗ ದೀಕ್ಷೆ ಹಾಗೂ ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದರು. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಶ್ರೀ ಮುರುೇಂದ್ರ ಮಹಾಶಿವಯೋಗಿಗಳು ಆದರ್ಶಪ್ರಾಯರು. ಶಿವಯೋಗಿಗಳದ್ದು ದಿವ್ಯಪಥ. ಅಂದರೆ ಆಧ್ಯಾತ್ಮಪಥ, ಧಾರ್ಮಿಕಪಥ, ಯೋಗಪಥ, ಧ್ಯಾನಪಥ, ಧ್ಯಾನದಿಂದ ದಿವ್ಯತೆ, ಭವ್ಯತೆ ಅದರಿಂದಾಗಿ ಅವರು ದಿವ್ಯಮಾನವ, ಭವ್ಯಮಾನವ ಎಂದರು.
ದಿವ್ಯಪಥವನ್ನು ಅನುಸರಿಸುತ್ತ. ಅದರಲ್ಲಿ ಮೈಮರೆತವರಲ್ಲ. ಅದನ್ನು ಲೋಕ ಕಲ್ಯಾಣಕ್ಕೆ ಬಳಿಸಿದವರು. ಹಲವರು ವ್ಯಕ್ತಿಗತ ಶಾಂತಿ-ಸಮಾಧಾನಕ್ಕಾಗಿ ಮನೆ-ಮಠ ತೊರೆಯುತ್ತಾರೆ. ಈ ದಿಶೆಯಲ್ಲಿ ಶಿವಯೋಗಿಗಳದು ಜವಾಬ್ದಾರಿಯುತ ಜೀವನ. ನಿತ್ಯವೂ ಶಿವಯೋಗ ಸುಖ ಅನುಭವಿಸುತ್ತ ಲೋಕ ಕಲ್ಯಾಣ ಕುರಿತು ಚಿಂತಿಸುತ್ತಾರೆ. ಅದನ್ನು ಸಾಧಿಸುತ್ತಾರೆ. ಲೋಕಹಿತ ಸಾಧಿಸಿದ ಜೀವನ ವ್ಯರ್ಥವೆಂಬ ಅರಿವು ಅವರಲ್ಲಿ ಜಾಗೃತವಾಗಿದ್ದರಿಂದ ಲೋಕಹಿತ ಸಾಧಿಸುತ್ತಾ ಹೋಗುತ್ತಾರೆ ಎಂದರು.
ಉತ್ಸವದಲ್ಲಿ ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೆಗಳಮನಿ, ಜಯದೇವ ಕೆರೂಡಿ, ಎಸ್.ಎಚ್.ಮಜೀದ್, ಮುರುಗೆಪ್ಪ ಕಡೆಕೊಪ್ಪ, ಶ್ರೀ ಮಠದ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net