ರಸ್ತೆ ಪಕ್ಕ ಸೂಚನಾ ಫಲಕ ಅಳವಡಿಸಿ

15 HVR 4
Published on

ಹಾವೇರಿ: ಹಿರೇಕೆರೂರ ಪಟ್ಟಣದಿಂದ ಹಾವೇರಿ ಕಡೆಗೆ ಹಾಗೂ ಚಿಕ್ಕೇರೂರು ಮಾರ್ಗವಾಗಿ ಆನವಟ್ಟಿ ಕಡೆಗೆ ತೆರಳುವ ಮುಖ್ಯ ರಸ್ತೆಗಳು ಸಂಧಿಸುವ ವೃತ್ತದಲ್ಲಿ ಸೂಚನಾ ಫಲಕಗಳು ಇಲ್ಲದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
ಹಿರೇಕೆರೂರಿನಿಂದ ರಾಜ್ಯ ಹೆದ್ದಾರಿ ಮೂಲಕ ಸಾಗಿ ಬಲಗಡೆ ತಿರುಗಿದರೆ ಜಿಲ್ಲಾ ಕೇಂದ್ರ ಹಾವೇರಿ ಮತ್ತು ಎಡ ಭಾಗದ ರಸ್ತೆ ಮೂಲಕ ಸಾಗಿದರೆ ಚಿಕ್ಕೇರೂರ, ಆನವಟ್ಟಿ, ಹಾನಗಲ್ಲಗೆ ಹೋಗಬಹುದು. ಇದು ರಾಜ್ಯ ಹೆದ್ದಾರಿಯಾಗಿದ್ದು, ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿ ಸೂಚನಾ ಫಲಕ ಅಳವಡಿಸದ ಕಾರಣ ಬಹುತೇಕ ಹಲವರು ರಸ್ತೆಬದಿ ವಾಹನ ನಿಲ್ಲಿಸಿ, ಜನರನ್ನು ಕೇಳಿ ಮುಂದೆ ಸಾಗಬೇಕಾದ ಅನಿವಾರ್ಯತೆ ಇದೆ.
ಇಂತಹ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಹಾಗಾಗಿ, ಈ ಸ್ಥಳದಲ್ಲಿ ಸಂಬಂಧಪಟ್ಟವರು ಈ ಕೂಡಲೇ ಸೂಚನಾ ಫಲಕ ಅಳವಡಿಸಬೇಕು ಎಂದು ಹಿರೇಕೆರೂರಿನ ಸತೀಶ ಎಂ. ಅವರು ‘ವಿಜಯವಾಣಿ’ ‘ಅಯ್ಯೋ ಪ್ರಾಬ್ಲಂ ಕಣ್ರೀ’ ಅಂಕಣದ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net