ಹಿರೇಕೆರೂರ: ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಚಂದ್ರಯಾನ- 3 ಯಶಸ್ವಿಯಾಗಲೆಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ವಿಶೇಷ ಪೂಜೆ ಸಲ್ಲಿಸಿ, ಸಂಕಲ್ಪ ಮಾಡಿದರು. ಹಿರೇಕೆರೂರ ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಹರೀಶ ಕಲಾಲ, ಶಂಕರ ತಿರಕಪ್ಪನವರ, ಸಿ.ಬಿ.ಮಾಳಗಿ, ವಿ.ಡಿ.ಹಂಪಾಳಿ, ಇತರರಿದ್ದರು.