

ಹಾವೇರಿ: ನಗರದ ಕಾಗಿನೆಲೆ ವೃತ್ತದಲ್ಲಿ ಶ್ರೀ ಗಜಾನನ ಯುವಕ ಮಂಡಳಿಯಿಂದ ಪ್ರತಿಷ್ಠಾಪಿಸಲಿರುವ ಹಿಂದು ಮಹಾಗಣಪತಿಯ ಭಗವಾ ದ್ವಜಾರೋಹಣ ಹಾಗೂ ಭೂಮಿ ಪೂಜೆ ಕಾರ್ಯಕ್ರಮವನ್ನು ಹರಸೂರ ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ನೆರವೇರಿಸಿದರು. ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕಮಿಟಿ ಗೌರವಾಧ್ಯಕ್ಷ ಎಸ್.ಆರ್.ಹೆಗಡೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ, ರಮೇಶ ಆನವಟ್ಟಿ, ವರುಣ ಆನವಟ್ಟಿ, ದೀಪಕ ಮಡಿವಾಳರ, ಸಿದ್ದು ಕುರಿಯವರ, ನವೀನ ಹಾವನೂರ, ಮಾಲತೇಶ ಜಾಲವಾಡಗಿ, ಸಂಜು ದೊಡ್ಡಮನಿ, ಕಲ್ಲೇಶ ಮೆಣಶಿನಹಾಳ, ವಿಜಯ ಬಾರ್ಕಿ, ಪ್ರಶಾಂತ ಸ್ವಾದಿ, ವಿನಾಯಕ ಬಾರ್ಕಿ, ರಾಜು ಆನವಟ್ಟಿ, ಗುಡ್ಡಪ್ಪ ಗುಮಕಾರ, ಆದರ್ಶ ಆನವಟ್ಟಿ, ಮಹೇಶ ಜಾದವ, ಪ್ರಜ್ವಲ್ ರೇವಣಕರ, ಇತರರಿದ್ದರು.