ಹಾವೇರಿಯ ವಿವಿಧೆಡೆ ಮಾ.17ರಂದು ವಿದ್ಯುತ್ ವ್ಯತ್ಯಯ

Published on

ಹಾವೇರಿ: ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಮಾ.17ರಂದು ಹಾವೇರಿ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಹೊಸಮನಿ ಸಿದ್ದಪ್ಪ 11 ಕೆ.ವಿ. ಫೀಡರ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ರಾಜೇಂದ್ರ ನಗರ, ನಗರ ಪೋಲಿಸ್ ಠಾಣೆ, ವಿದ್ಯಾನಗರ ಈಸ್ಟ್, ಶಿವಾಜಿ ನಗರ 4ನೇ ಕ್ರಾಸ್, ಹೈಸ್ಕೂಲ್ ರೋಡ್, ಗಾಂಧಿ ಸರ್ಕಲ್, ಎಂಜಿ ರೋಡ್, ಎಲ್‌ಬಿಎಸ್ ಮಾರ್ಕೆಟ್, ಶಿವಲಿಂಗ ನಗರ, ಗುತ್ತಲ ರೋಡ್, ಮೆಹಬೂಬ ನಗರ, ಗೂಗಿಕಟ್ಟೆ, ಮಣೆಗಾರ ಓಣೆ, ರಾಣೆಬೆನ್ನೂರ ರೋಡ್, ಏಲಕ್ಕಿ ಓಣಿ, ಅಕ್ಕಿ ಪೇಟೆ, ಹಾಗೂ ಮಾಗವಿ ಚೇಂಬರ್ಸ್‌ ಹಿಂಭಾಗ ಬರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net