ಹೆಸ್ಕಾಂ ಗ್ರಾಹಕರ ಕುಂದುಕೊರತೆ ನಿವಾರಣೆ ಸಭೆ 19ರಂದು

Published on

ಹಾವೇರಿ: ಜಿಲ್ಲಾ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಯ ಮಾಸಿಕ ಸಭೆ ಜೂ.19ರಂದು ಬೆಳಗ್ಗೆ 11 ಗಂಟೆಗೆ ಹಾವೇರಿ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಅಧೀಕ್ಷಕ ಇಂಜನೀಯರ್ ಕಚೇರಿಯಲ್ಲಿ ನಡೆಯಲಿದೆ.
ವಿದ್ಯುತ್ ಪೂರೈಕೆ, ಬಿಲ್ಲಿಂಗ್ ಮತ್ತು ವಿದ್ಯುತ್ ಇಲಾಖೆಯ ಇತರ ಸಮಸ್ಯೆಗಳು ಹಾಗೂ ಸಲಹೆಗಳನ್ನು ಗ್ರಾಹಕರು ತಮ್ಮ ಹೆಸರು, ಆರ್.ಆರ್.ನಂಬರ್, ವಿಳಾಸ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಿಖಿತವಾಗಿ ಸಭೆಯಲ್ಲಿ ನೀಡಬಹುದು. ಈ ಮೂಲಕ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹಾವೇರಿ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಅಧೀಕ್ಷಕ ಇಂಜನೀಯರ್(ವಿದ್ಯುತ್) ನಾಗಪ್ಪ ಎಸ್.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net