ಹತ್ತಾರು ಕೋಟಿ ಖರ್ಚು ಮಾಡಿದರೂ ಹೆಗ್ಗೇರಿ ಕೆರೆ ಅಭಿವೃದ್ಧಿ ಕಂಡಿಲ್ಲ; ಎಂ.ಎಸ್.ಕೋರಿಶೆಟ್ಟರ್ ಆರೋಪ; ಹೆಗ್ಗೇರಿ ಕೆರೆಗೆ ಬಾಗಿನ ಅರ್ಪಣೆ

22 HVR 9
Published on

ಹಾವೇರಿ: ಹೊರವಲಯದ ಐತಿಹಾಸಿಕ ಹೆಗ್ಗೇರಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ, ತಾಲೂಕು ಘಟಕ, ಹಾವೇರಿ ಹುಕ್ಕೇರಿ ಮಠದ ಅಕ್ಕನ ಬಳಗ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಮಂಗಳವಾರ ಬಾಗಿನ ಅರ್ಪಿಸಲಾಯಿತು.

ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಮಾತನಾಡಿ, 666 ಎಕರೆ ವಿಸ್ತೀರ್ಣವುಳ್ಳ ಕೆರೆ ಎರಡು ವರ್ಷಗಳ ಹಿಂದೆ ಕೋಡಿ ಬಿದ್ದಿತ್ತು. ಈ ವರ್ಷ ಮತ್ತೆ ಕೋಡಿ ಹರಿದಿದೆ. ಸರ್ಕಾರಗಳು ಹತ್ತಾರು ಕೋಟಿ ರೂ. ಖರ್ಚು ಮಾಡಿದರೂ ನಳ ಮಹಾರಾಜರು ನಿರ್ಮಿಸಿರುವ ಹೆಗ್ಗೇರಿ ಕೆರೆ ಅಭಿವೃದ್ಧಿ ಕಂಡಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಕೆರೆಗೆ ದೇಶ- ವಿದೇಶಗಳಿಂದ ಪಕ್ಷಿಗಳು ವಲಸೆ ಬರುತ್ತವೆ. ಪ್ರವಸೋದ್ಯಮ ಸಚಿವ ಎಚ್.ಕೆ.ಪಾಟೀಲರು ಐದು ಕೋಟಿ ರೂ. ಬಿಡುಗಡೆ ಮಾಡಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದರು.

ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಶಂಭು ಚಕ್ಕಡಿ, ಜಿಲ್ಲಾ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಅಜ್ಜನಗೌಡ ಗೌಡಪ್ಪನವರ, ಚಂದ್ರಶೇಖರ ಪಟ್ಟಣಶೆಟ್ಟಿ, ಷಣ್ಮುಖಪ್ಪ ಉಳ್ಳಾಗಡ್ಡಿ, ಸಿದ್ದಪ್ಪ ಬಂಕಾಪುರ, ದ್ರಾಕ್ಷಾಯಿಣಿ ಗಾಣಿಗೇರ, ಅಮೃತಮ್ಮ ಶೀಲವಂತರ, ಜ್ಯೋತಿ ಬಶೆಟ್ಟಿಯವರ, ತಾಲೂಕ ಘಟಕದ ಪದಾಧಿಕಾರಿಗಳಾದ ವೀರನಗೌಡ ಗೌಡರ, ಪಂಚಾಕ್ಷರಯ್ಯ ಮಳಿಮಠ, ಶ್ವೇತಾ ತುಪ್ಪದ, ಲತಾ ಭರತನೂರಮಠ, ಅಶ್ವಿನಿ ಟೊಂಕದ, ಚಂದ್ರಕಲಾ ಇಚ್ಚಂಗಿ, ನೀಲಮ್ಮ ಗೌಡಪ್ಪನವರ, ಶೈಲಜಾ ಕೋರಿಶೆಟ್ಟರ, ಲಲಿತಾ ಶಿವಶೆಟ್ಟರ, ನಿರ್ಮಲಾ ವಾತ್ನಾಳಮಠ, ರೇಖಾ ಶೆಟ್ಟರ್, ಚಂಪಾ ಹುಣಸಿಕಟ್ಟಿ, ರೇಖಾ ಮಾಗನೂರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net