ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ; ನದಿಯಂತೆ ಹರಿದ ಹಾವೇರಿ ಹಳೆಯ ಪಿಬಿ ರಸ್ತೆ; ರಸ್ತೆ ತುಂಬ ನದಿಯಂತೆ ಹರಿದ ಮಳೆನೀರು

17 HVR 5 A
Published on

ಹಾವೇರಿ: ಯಾಲಕ್ಕಿ ಕಂಪಿನ ನಗರಿ ಹಾವೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಎರಡು ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದೆ. ಇದರಿಂದ ಕೆಲಕಾಲ ಜನಜೀವನ ತತ್ತರಿಸಿತ್ತು.

ಜಿಲ್ಲಾ ಕೇಂದ್ರ ಹಾವೇರಿ, ಕರ್ಜಗಿ, ಗುತ್ತಲ ಭಾಗ, ರಾಣೆಬೆನ್ನೂರ, ಬ್ಯಾಡಗಿ, ಮೋಟೆಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಹಾನಗಲ್ಲ, ಅಕ್ಕಿಆಲೂರ, ಶಿಗ್ಗಾಂವಿ, ಬಂಕಾಪುರ, ಸವಣೂರ ಸುತ್ತಮುತ್ತ ಭರ್ಜರಿ ಮಳೆ ಸುರಿಯಿತು. ಬೆಳಗ್ಗೆಯಿಂದ ಪ್ರಖರವಾದ ಬಿಸಿಲು ಸುರಿಯುತ್ತಿತ್ತು. ಬಿಸಿಲಿನ ಧಗೆಗೆ ಜನ ಬೇಸತ್ತಿದ್ದರು. ಸಂಜೆಯಾಗುತ್ತಿದ್ದಂತೆ ಭರ್ಜರಿ ಮಿಂಚು, ಗುಡುಗು, ಸಿಡಿಲು ಸಮೇತ ಮಳೆ ಆರಂಭವಾಯಿತು. ಸತತವಾಗಿ ಎರಡು ಗಂಟೆಗಳವರೆಗೆ ರಭಸವಾದ ಮಳೆ ಸುರಿಯಿತು.

ಮಳೆಯಿಂದಾಗಿ ಹಾವೇರಿ ನಗರದ ಹಳೆಯ ಪಿಬಿ ರಸ್ತೆ, ಎಂಜಿ ರಸ್ತೆ ಸೇರಿದಂತೆ ಹಲವು ರಸ್ತೆಗಳು ಹೊಳೆಯಂತೆ ತುಂಬಿ ಹರಿದವು. ಇದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಶಹರ ಪೊಲೀಸ್ ಠಾಣೆಯಿಂದ ಎಸ್‌ಪಿ ಕಚೇರಿ, ಪ್ರವಾಸಿ ಮಂದಿರದ ಎದುರಿನ ರಸ್ತೆ ನದಿಯಂತಾಗಿತ್ತು. ಹೀಗಾಗಿ, ವಾಹನ ಸವಾರರು ಕೆಲ ಸಮಯ ಏಕಮುಖವಾಗಿ ಸಂಚರಿಸಿದರು. ನಗರದಲ್ಲಿ ಸರಿಯಾದ ಚರಂಡಿ, ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಳೆದ ವರ್ಷದಂತೆ ಈ ವರ್ಷವೂ ಸಮಸ್ಯೆ ಜೀವಂಥವಾಗಿ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net