ಹಾವೇರಿ: ಭಾರಿ ಮಳೆಯಿಂದಾಗಿ ವರದಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಸವಣೂರ ತಾಲೂಕಿನ ಚಳ್ಳಾಳ ಗ್ರಾಮದ ಬಳಿ ಸವಣೂರ- ಹಾವೇರಿ ಮಾರ್ಗದ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಇದರಿಂದ ಗುರುವಾರ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತಾಯಿತು.