ಹಾವೇರಿಯಲ್ಲಿ ಅರ್ಧ ಗಂಟೆ ಭಾರೀ ಗಾಳಿ, ಮಳೆ

4 Rain
Published on

ಹಾವೇರಿ: ಯಾಲಕ್ಕಿ ನಗರಿ ಹಾವೇರಿ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ಗಾಳಿ ಸಹಿತ ಮಳೆ ಸುರಿದಿದೆ.

ಬೆಳಗ್ಗೆಯಿಂದ ಬಿರು ಬಿಸಿಲು ಸುರಿಯುತ್ತಿತ್ತು. ಸಂಜೆಯಾಗುತ್ತಿದ್ದಂತೆ ನೀಲಿ ಮೋಡ ಆವರಿಸಿಕೊಂಡು, ರಭಸವಾದ ಮಳೆ ಆರಂಭವಾಯಿತು. ಮಳೆ ಜತೆಗೆ ಭಾರೀ ಜೋರಾಗಿ ಗಾಳಿ ಬೀಸಲಾರಂಭಿಸಿತು. ಇದರಿಂದ ಬಿಸಿಯಾಗಿದ್ದ ಭೂಮಿ ತಂಪಾಯಿತು.

ಮಳೆ ಬರುತ್ತಿದ್ದಂತೆ ಎಂದಿನಂತೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರು ಮನೆ ಸೇರಲು ಪರದಾಡಿದರು. ರೈತರು ಬಣವೆ, ಕಾಳು, ಕಡಿ ರಕ್ಷಣೆಯಲ್ಲಿ ನಿರತರಾಗಿದ್ದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net