ಹಾವೇರಿ: ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಬಿ.ಎಸ್ಸಿ (ಕೃಷಿ) ವಿದ್ಯಾರ್ಥಿಗಳಿಗೆ ಅರಣ್ಯ ವಿಭಾಗದ ಕೋರ್ಸ್ ಬೋಧಿಸಲು ಅರೆಕಾಲಿಕ ಉಪನ್ಯಾಸಕರ ಹುದ್ದೆಗೆ ತಾತ್ಕಾಲಿಕ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಸ್ವವಿವರಗಳನ್ನು ಭರ್ತಿ ಮಾಡಿ ಎರಡು ಪ್ರತಿಗಳೊಂದಿಗೆ ದಿನಾಂಕ ಆಗಸ್ಟ್ 1ರಂದು ಬೆಳಗ್ಗೆ 11 ಗಂಟೆಗೆ, ಡೀನ್(ಕೃಷಿ) ಕಾರ್ಯಾಲಯ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ದೃಢೀಕೃತ ಎರಡು ಪ್ರತಿಗಳನ್ನು ತರಬೇಕು. ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.
ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಈ ನೇಮಕಾತಿಯು ತಾತ್ಕಾಲಿಕವಾಗಿರುವುದರಿಂದ ಯಾವುದೇ ಸಮಯದಲ್ಲಿ ಯಾವುದೇ ಕಾರಣ ತಿಳಿಸದೆ ತೆಗೆದು ಹಾಕಬಹುದು ಹಾಗೂ ಈ ನೇಮಕಾತಿಯು ತಾತ್ಕಾಲಿಕವಾಗಿರುವುದರಿಂದ ಕೃಷಿ ವಿಶ್ವವಿದ್ಯಾಲಯದಲ್ಲಿ ನೇರ ನೇಮಕಾತಿಗಾಗಿ ಯಾವುದೇ ತರಹದ ಹಕ್ಕಿಗೆ ಒಳಪಟ್ಟಿರುವುದಿಲ್ಲ ಎಂದು ಕೃಷಿ ಮಹಾವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರೊಜೆಕ್ಟ್ ಅಸಿಸ್ಟಂಟ್ ಹುದ್ದೆಗೆ ನೇರ ಸಂದರ್ಶನ ಆ.1ರಂದು :
ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಪ್ರೊಜೆಕ್ಟ್ ಅಸಿಸ್ಟಂಟ್ ಹುದ್ದೆಗೆ ತಾತ್ಕಾಲಿಕ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಬಿ.ಎಸ್ಸಿ (ರಸಾಯಾನಶಸ್ತ್ರ) ವಿದ್ಯಾರ್ಹತೆ ಹೊಂದರಿಬೇಕು. ಕಂಪ್ಯೂಟರ್ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಸ್ವವಿವರಗಳನ್ನು ಭರ್ತಿ ಮಾಡಿದ ಎರಡು ಪ್ರತಿಗಳೊಂದಿಗೆ ಆ.1ರಂದು ಮಧ್ಯಾಹ್ನ 3 ಗಂಟೆಗೆ, ಡೀನ್(ಕೃಷಿ)ರವರ ಕಾರ್ಯಾಲಯ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.