ಹಾಲಸ್ವಾಮಿ ಮಠದಲ್ಲಿ ಪುಣ್ಯಾರಾಧನೆ ಜು.27ರಂದು

Published on

ಹಾವೇರಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದಲ್ಲಿ ಜು.27ರಂದು ಬೆಳಗ್ಗೆ 11.30ಕ್ಕೆ ಸದ್ಗುರು ಶಿವಯೋಗಿ ಲಿಂ.ಸಣ್ಣ ಹಾಲಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ.

ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ಬರುವ ರೊಟ್ಟಿ ಪಂಚಮಿ ದಿನದಂದು ಲಿಂ.ಸಣ್ಣ ಹಾಲಸ್ವಾಮಿಯವರ ಪುಣ್ಯಾರಾಧನೆ ನಡೆಯಲಿದೆ. ಶ್ರೀಗಳ ಕತೃ ಗುದ್ದುಗೆಗೆ ವಿಶೇಷ ಪೂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀಮಠದ ಪ್ರಕಟಣೆ ಮೂಲಕ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net