ಹಂಸಭಾವಿ ಹೊಳಬಸವೇಶ್ವರ, ವೀರಭದ್ರೇಶ್ವರ ತೇರು

26-hbv jatre
Published on

ಹಂಸಭಾವಿ: ಗ್ರಾಮದ ಶ್ರೀ ಹೊಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ಜಾತ್ರೆ ನಿಮಿತ್ತ ಬೆಳಗ್ಗೆ ಹಿರೇಮತ್ತೂರಿನ ಫಕೀರಾಚಾರ್ಯ ಹಾಗೂ ಸಂಗಡಿಗರಿಂದ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಗುಗ್ಗಳ ಹೊರಟು ಹೊಳಬಸವೇಶ್ವರ ದೇವಸ್ಥಾನ ತಲುಪಿದ ನಂತರ ಮಹಾರಥೋತ್ಸವ ಜರುಗಿತು. ರಥಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ, ಬೆಂಡು, ಬೆತ್ತಾಸ ಸಮರ್ಪಿಸಿದರು. ಬಳಿಕ ದನದ ಪೇಟೆಯ ವ್ಯಾಪಾರಸ್ಥರು ಹಾಗೂ ಭಕ್ತಾದಿಗಳಿಂದ ಪ್ರಸಾದ ವಿನಿಯೋಗ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net