ವಿಕಲಚೇತನರಿಗೆ ವೈದ್ಯಕೀಯ ಮೌಲ್ಯಮಾಪನಾ ತಪಾಸಣಾ ಶಿಬಿರ

13 HVR 4
Published on

ಹಾವೇರಿ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಬೆಂಗಳೂರು ಅಲಿಂಕೋ ಸಂಸ್ಥೆ ಸಹಯೋಗದಲ್ಲಿ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆ ವಿತರಣೆ ವಿಶೇಷ ವೈದ್ಯಕೀಯ ಮೌಲ್ಯಮಾಪನಾ ತಪಾಸಣಾ ಶಿಬಿರ ಇತ್ತೀಚೆಗೆ ಶಿಗ್ಗಾಂವಿಯ ಚನ್ನಬಸವೇಶ್ವರ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಹಾಗೂ ಸವಣೂರ ತಾಲೂಕು ಆಸ್ಪತ್ರೆಯಲ್ಲಿ ಜರುಗಿತು.
ಶಿಗ್ಗಾಂವಿಯಲ್ಲಿ 240 ಹಾಗೂ ಸವಣೂರಲ್ಲಿ 200 ವಿಕಲಚೇತನರು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net