ಶಿಗ್ಗಾಂವಿ- ಸವಣೂರಲ್ಲಿ ವಿಕಲಚೇತನರಿಗೆ ಮೌಲ್ಯಮಾಪನಾ ಶಿಬಿರ 23, 24ರಂದು

Published on

ಹಾವೇರಿ: ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲು ವಿಶೇಷ ವೈದ್ಯಕೀಯ ಮೌಲ್ಯಮಾಪನಾ ಶಿಬಿರ ಡಿ.23ರಂದು ಶಿಗ್ಗಾಂವಿಯಲ್ಲಿ ಹಾಗೂ ಡಿ.24ರಂದು ಸವಣೂರ ತಾಲೂಕಿನ ತಾಲೂಕು ಆಸ್ಪತ್ರೆಗಳಲ್ಲಿ ಜರುಗಲಿವೆ.

ವಿಕಲಚೇತನ ಅಭ್ಯರ್ಥಿಗಳು ಶಿಬಿರಕ್ಕೆ ಆಗಮಿಸುವಾಗ ವಿಳಾಸದ ಗುರುತಿಗಾಗಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್ ಅಥವಾ ಚಾಲನಾ ಪತ್ರ ಯಾವುದಾದರೊಂದು ದಾಖಲೆ, ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ಗುರುತಿನ ಚೀಟಿ(ಯುಡಿಐಡಿ ಕಾರ್ಡ್) ಹಾಗೂ ಆನ್‌ಲೈನ್‌ನಲ್ಲಿ ಪಡೆದ ವೈದ್ಯಕೀಯ ಪ್ರಮಾಣಪತ್ರ, ವಾರ್ಷಿಕ ಆದಾಯ ಪ್ರಮಾಣಪತ್ರ ಹಾಗೂ ಪಡಿತರ ಚೀಟಿ ಕಡ್ಡಾಯವಾಗಿ ತರಬೇಕು. ಜತೆಗೆ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ತರಬೇಕು.

ಆಯಾ ತಾಲೂಕಿನ ವಿಕಲಚೇತನರು ಈ ಮೌಲ್ಯಮಾಪನಾ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

*ಹೆಚ್ಚಿನ ಮಾಹಿತಿಗಾಗಿ ಶಿಗ್ಗಾಂವಿ ಎಂ.ಆರ್.ಡಬ್ಲ್ಯೂ ಸಿದ್ದಪ್ಪ ಮಸಳಿ ಮೊ.ಸಂ. 90080 32497 ಹಾಗೂ ಸವಣೂರಿನ ಎಂ.ಆರ್.ಡಬ್ಲ್ಯೂ ಶಿವಪ್ಪ ಯರೇಶಿಮಿ ಮೊ.ಸಂ. 96324 41802 ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net