ಹಾವೇರಿ: ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿಧಾನ ಪರಿಷತ್ ಸಭಾಪತಿಗ ಬಸವರಾಜ ಹೊರಟ್ಟಿ ಅವರು ವಿಕಲಚೇತನ ಫಲಾನುಭವಿಗಳಿಗೆ ನಾಲ್ಕು ತ್ರಿಚಕ್ರ ವಾಹನಗಳನ್ನು ಹಸ್ತಾಂತರಿಸಿದರು. ತಹಸೀಲ್ದಾರ್ ಶರಣಮ್ಮ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಕಲ್ಯಾಣಧಿಕಾರಿ ಆಶು ನದಾಫ, ಇತರರಿದ್ದರು.