ಧೈರ್ಯದಿಂದ ಸಮಸ್ಯೆ ಎದುರಿಸಿ; ವಿಕಲಚೇತನರ ಕ್ರೀಡಾಕೂಟದಲ್ಲಿ ಶ್ರೀನಿವಾಸ ಆಲದರ್ತಿ ಕಿವಿಮಾತು

3 HVR 8
Published on

ಹಾವೇರಿ: ವಿಕಲಚೇತನ ವಿದ್ಯಾರ್ಥಿಗಳು ಎದೆಗುಂದದೆ ಎಲ್ಲವನ್ನು ಧೈರ್ಯದಿಂದ ಎದುರಿಸುವ ಪರಿಪಾಠ ಮೈಗೂಡಿಸಿಕೊಳ್ಳಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ದಿಸೆಯಲ್ಲಿ ಗುರಿ ಹೊಂದಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಹೇಳಿದರು.
ನಗರದ ಇಜಾರಿಲಕಮಾಪುರದ ಜ್ಞಾನಜ್ಯೋತಿ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲ ಮಕ್ಕಳ ವಸತಿ ಶಾಲೆಗಳ ಸ್ವಯಂಸೇವಾ ಸಂಘದ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಕಲಚೇತನರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿಕಲಚೇತನರು ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗಬೇಕು. ಮಾನಸಿಕವಾಗಿ ಸದೃಢರಾಗಿ ಆತ್ಮಸ್ಥೈರ್ಯ ಬೆಳಸಿಕೊಂಡು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.
ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ ಕ್ರೀಡಾ ಜ್ಯೋತಿ ಬೆಳೆಗಿಸಿ ಮಾತನಾಡಿದರು. ವಿಕಲಚೇತನರು ಅಸಹಾಯಕರಲ್ಲ. ಸದೃಢರಿಗಿಂತಲೂ ವಿಶಿಷ್ಟ ಸಾಧನೆ ಮಾಡಬಲ್ಲರು. ವಿಕಲಚೇತನರಿಗೆ ಅನುಕಂಪ ಅಲ್ಲ, ಅವಕಾಶ ಬೇಕು. ವಿದ್ಯಾರ್ಥಿಗಳು ಕ್ರೀಡೆಯ ಮೂಲಕ ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.
ಜಿಲ್ಲಾ ವಿಕಲಚೇತನರ ಸಂಘದ ಉಪಾಧ್ಯಕ್ಷ ಮೌನೇಶ ಬಡಿಗೇರ ಹಾಗೂ ಜಿಲ್ಲಾ ವಿಕಲಚೇತನ ಮಕ್ಕಳ ವಸತಿ ಶಾಲೆಗಳ ಸ್ವಯಂ ಸೇವಾ ಸಂಘದ ಅಧ್ಯಕ್ಷ ಎಚ್.ಆರ್.ಶಿವಕುಮಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ವಿಶೇಷ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಪಾಟೀಲ, ಜಿಲ್ಲಾ ಎಂ.ಆರ್.ಡಬ್ಲ್ಯೂ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಪ್ಪ ಮಸಳಿ, ಜಿಲ್ಲಾ ಅಂಗವಿಕಲರ ಸಂಘದ ಕಾರ್ಯದರ್ಶಿ ಮಲ್ಲೇಶ ದೇಶಗತ್ತಿ, ಎಸ್.ವಿ.ಆಲದಕಟ್ಟಿ, ಎಸ್.ಎಸ್.ಬಂಗಿಗೌಡ್ರ, ಸುಭಾಸ ಮಲ್ನಾಡ, ವೀರಯ್ಯ ಹಿರೇಮಠ, ಪಾಂಡು ಸುಧಾ, ಮಂಜುನಾಥ ನೀರಲಗಿ, ಸಿದ್ದಪ್ಪ ಮುಸಡಿ, ಇತರರಿದ್ದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಕೆಂಪಳ್ಳೇರ ಸ್ವಾಗತಿಸಿದರು. ಹನುಮಂತಪ್ಪ ಜಾಡರ ನಿರೂಪಿಸಿದರು. ನೇತ್ರಾವತಿ ಮಗ್ಗದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net