ಹಾನಗಲ್ಲ: ತಾಲೂಕಿನ ಮಹಾರಾಜಪೇಟೆ ಬಳಿಯ ಜವಾಹರ ನವೋದಯ ವಿದ್ಯಾಲಯದ 2025-26ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಸೆ.23ರವರೆಗೆ ಅವಧಿ ವಿಸ್ತರಿಸಲಾಗಿದೆ.
ಗಣಕೀಕೃತ ಅರ್ಜಿಯನ್ನು www.navodaya.gov.inಅಥವಾ https://cbseitms.rcil.gov.in/nvs/ ಜಾಲತಾಣದಲ್ಲಿ ಸಲ್ಲಿಸಬೇಕು. 6ನೇ ತರಗತಿ ಪ್ರವೇಶ ಪರೀಕ್ಷೆ ದಿನಾಂಕ ಜನವರಿ 18, 2025ರಂದು ನಡೆಯಲಿದೆ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.