ಸಂತ್ರಸ್ತೆಯನ್ನು ನಾನೂ ಭೇಟಿಯಾಗುತ್ತೇನೆ; ಶಾಸಕ ಶ್ರೀನಿವಾಸ ಮಾನೆ ಹೇಳಿಕೆ

Published on

ಹಾವೇರಿ: ಹಾನಗಲ್ಲನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದ ಹಿರಿಯರು ಭೇಟಿಯಾಗಿದ್ದು, ನಾನೂ ಕೂಡ ಭೇಟಿಯಾಗಿ ಧೈರ್ಯ ತುಂಬುತ್ತೇನೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ನರಸೀಪುರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆ ಹಾಗೂ ಪರಪುರಷನ ಮೇಲೆ ಹಲ್ಲೆ ಮಾಡಿದ ಕುರಿತು ಮಾಹಿತಿ ಪಡೆದುಕೊಂಡಿದ್ದೆ. ಅಂದು ರೇಪ್ ಕುರಿತ ಮಾಹಿತಿ ಎಲ್ಲೂ ಹೊರಗೆ ಬಂದಿರಲಿಲ್ಲ. ಜ.9ರಂದು ಸಂಜೆ ಯುವತಿಯ ದೃಶ್ಯಗಳು ವೈರಲ್ ಆಗಿದ್ದವು. ಆ ದೃಶ್ಯಗಳನ್ನು ಪೊಲೀಸರಿಗೆ ಕಳುಹಿಸಿ ಪರಿಶೀಲನೆ ಮಾಡುವಂತೆ ಸೂಚಿಸಿದ್ದೆ. ನಾನು ಜ.10, 11ರಂದು ಬೆಂಗಳೂರಿನಲ್ಲಿದ್ದೆ. ಅಲ್ಲಿಂದ ವಾಪಸಾದ ಬಳಿಕ ಬಂದ ಬಳಿಕ ಪೊಲೀಸರೊಂದಿಗೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದೇನೆ ಎಂದರು.
ನಾನು ಸಂತ್ರಸ್ಥೆಯನ್ನು ಭೇಟಿಯಾಗಬೇಕೆಂದಾಗ ಅವರು ವೈದ್ಯಕೀಯ ಪರೀಕ್ಷೆಯಲ್ಲಿದ್ದರು. ಆದರೆ, ನಮ್ಮ ಹಿರಿಯ ಶಾಸಕರಾದ ಬಸವರಾಜ ಶಿವಣ್ಣನವರ ಭೇಟಿಯಾಗಿದ್ದಾರೆ. ಅವರು ಬೇಟಿಯಾಗಿದ್ದು ಕಾಟಾಚಾರಕ್ಕೆ ಅಲ್ಲ. ಶೀಘ್ರವೇ ನಾನು ಕೂಡ ಭೇಟಿಯಾಗಿ ಧೈರ್ಯ ತುಂಬುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net