ಬಸ್ ನಲ್ಲಿ ನಮಾಜ್ ಮಾಡಿದ್ದ ಚಾಲಕ ಎ.ಆರ್ ಮುಲ್ಲಾ ಅಮಾನತು

1 Namaj Driver Suspended
Published on

ಹಾವೇರಿ: ಕರ್ತವ್ಯದ ವೇಳೆ ಬಸ್ ನಲ್ಲಿ ನಮಾಜ್ ಮಾಡಿದ್ದ ಹಾನಗಲ್ಲ ಘಟಕದ ಚಾಲಕ ಎ.ಆರ್ ಮುಲ್ಲಾ ಅವರನ್ನು ಅಮಾನತು ಮಾಡಿ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.

ಏ.29ರಂದು ಎ.ಆರ್ ಮುಲ್ಲಾ ವಿಶಾಲಘಡದಿಂದ ಹಾನಗಲ್ಲ ಕಡೆಗೆ ಹೊರಟಾಗ ಹುಬ್ಬಳ್ಳಿಯ ಗಬ್ಬೂರ ಬಳಿ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಎಬ್ಬಿಸಿ ನಮಾಜ್ ಮಾಡಿದ್ದರು. ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕ ಸೇವೆಯಲ್ಲಿ ಇರುವಾಗ ಧಾರ್ಮಿಕ ಆಚರಣೆ ಮಾಡಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಎ.ಆರ್ ಮುಲ್ಲಾ ಅವರನ್ನು ಸಾರಿಗೆ ಸಂಸ್ಥೆ ಅಮಾನತು ಮಾಡಿದೆ.

ಚಾಲಕನ ವರ್ತನೆ ಕುರಿತು ವಿಜಯವಾಣಿ ವರದಿ ಪ್ರಕಟಿಸಿತ್ತು. ಈ ಕುರಿತು ತನಿಖೆ ನಡೆಸಿ, ತಪ್ಪು ಕಂಡಲ್ಲಿ ಶಿಸ್ತು ಕ್ರಮ ಜರುಗಿಸಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದರು‌. ಈ ಹಿನ್ನೆಲೆಯಲ್ಲಿ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net