ಬ್ಯಾಗವದಿ ಗ್ರಾಮದ ಎಡೆಯೂರ ಮಠದ ಜಾತ್ರೆ ಮಾ.4ರಿಂದ ಮಾ.11ರವರೆಗೆ

5 Byagavadi ratha
Published on

ಹಾನಗಲ್ಲ: ತಾಲೂಕಿನ ಬ್ಯಾಗವಾದಿ ಗ್ರಾಮದ ಎಡೆಯೂರ ಶ್ರೀ ತೋಂಟದಾರ್ಯ ಸಿದ್ದಲಿಂಗೇಶ್ವರ ಮಠದ ಜಾತ್ರಾ ಮಹೋತ್ಸವ ಮಾ.4ರಿಂದ ಆರಂಭವಾಗಿದ್ದು, ಮಾ.11ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಮಾ.6ರಂದು ಸಂಜೆ ಕಂಕಣಧಾರಣ, ಮಾ.7ರಂದು ಬಸವಣ್ಣದೇವರಿಗೆ ಲಗ್ನ ಹಾಗೂ ಸಾಮೂಹಿಕ ವಿವಾಹ ಹಾಗೂ ಅನ್ನಪ್ರಸಾದ ನೆರವೇರಲಿದೆ. ಮಾ.8ರಂದು ಕುಂಭ ಹೊತ್ತ ಮಹಿಳೆಯರೊಂದಿಗೆ ಕಳಸದ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಹೂವಿನ ರಥೋತ್ಸವ ನಡೆಯಲಿದೆ. ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ಡಂಬಳ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಉಪ್ಪಣಸಿಯ ಶ್ರೀ ಜಯಬಸವ ಸ್ವಾಮೀಜಿ, ಮತ್ತಿತರ ಮಠಾಧೀಶರು ಸಾನ್ನಿಧ್ಯದಲ್ಲಿ ಜಾತ್ರೆ ನಡೆಯಲಿದೆ.

ರಥೋತ್ಸವ ಲೋಕಾರ್ಪಣೆ 9ಕ್ಕೆ :

ಮಾ.9ರಂದು ಬೆಳಗ್ಗೆ 9ಕ್ಕೆ ಅರಳೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸಿದ್ದಲಿಂಗೇಶ್ವರ ದೇವರ ರಥೋತ್ಸವ ಲೋಕಾರ್ಪಣೆ, ರಥಶಾಂತಿ ಹೋಮ ಹಾಗೂ ರಥೋತ್ಸವ ಜರುಗಲಿದೆ ಎಂದು ಪತ್ರಕರ್ತ ಹೂವಪ್ಪ ಇಂಗಳಗೊಂದಿ ಹಾಗೂ ಬ್ಯಾಗವಾದಿ ಗ್ರಾಮದ ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net