ಬಸ್ ಫುಟ್‌ರೆಸ್ಟ್ ಮೇಲೆ ನೇತಾಡುವ ವಿದ್ಯಾರ್ಥಿಗಳು; ಕೋಡಬಾಳ ಗ್ರಾಮಕ್ಕೆ ಸಾರಿಗೆ ಸೌಕರ್ಯಕ್ಕೆ ಒತ್ತಾಯ

29 HVR 4 A
Published on

ಹಾವೇರಿ: ತಾಲೂಕಿನ ಹಾವೇರಿ- ಹಾಲಗಿ- ಕೋಡಬಾಳ ನಡುವೆ ಸಂಚರಿಸುವ ಸಾರಿಗೆ ಬಸ್‌ಗಳ ಸಂಖ್ಯ ವಿರಳವಾಗಿದ್ದು, ವಿದ್ಯಾರ್ಥಿಗಳು ಫುಟ್‌ರೆಸ್ಟ್‌ನಲ್ಲಿ ನಿಂತು ನೇತಾಡುವಂತಾಗಿದೆ.

ಬಸ್‌ಗಳ ಕೊರತೆ ಹಿನ್ನೆಲೆ ನೂರಾರು ವಿದ್ಯಾರ್ಥಿಗಳು ಬಸ್‌ನಲ್ಲಿ ನಿಂತುಕೊಳ್ಳಲೂ ಜಾಗ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಬಾಗಿಲ ಬಳಿ ನಿಂತು ನೇತಾಡುವ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಸಿಕ್ಕಷ್ಟು ಜಾಗದಲ್ಲಿ ನಿಂತು ಊರಿನತ್ತ ಹೊರಟಿದ್ದ ದೃಶ್ಯ ಕಂಡುಬಂತು. ಶಕ್ತಿ ಯೋಜನೆಯಿಂದಾಗಿ ಇರುವ ಬಸ್‌ಗಳು ಕೂಡ ಹೆಚ್ಚಿನ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.

ತಾಲೂಕಿನ ಕೋಡಬಾಳ ಗ್ರಾಮಕ್ಕೆ ಸೂಕ್ತ ಬಸ್ ಸೌಕರ್ಯದ ಕೊರತೆ ಇದೆ. ಲಕ್ಷ್ಮೇಶ್ವರ, ಶಿರಹಟ್ಟಿಯಿಂದ ಹಾವೇರಿ ಕಡೆಗೆ ಬರುವ ಬಸ್‌ಗಳ ಮಾರ್ಗಗಳನ್ನು ಹೆಚ್ಚಿಸಬೇಕು. ಕೋಡಬಾಳ ಗ್ರಾಮಕ್ಕೆ ನಿಲುಗಡೆ ವ್ಯವಸ್ಥೆ ಮಾಡಬೇಕು ಎಂದ ವಿದ್ಯಾರ್ಥಿಗಳು, ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ವಿಭಾಗೀಯ ಸಂಚಾರ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹಾವೇರಿ ವಿಭಾಗದ ಡಿಪೋ ಮ್ಯಾನೇಜರ್ ಆರ್.ಸಿ.ಪಾಟೀಲ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net