ವಿವಿಧ ಗ್ರಾಮಗಳಲ್ಲಿ ಸೆ.16ರಂದು ವಿದ್ಯುತ್ ವ್ಯತ್ಯಯ

Published on

ಹಾವೇರಿ: ಗುತ್ತಲ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಗುತ್ತಲ 11 ಕೆವಿ ಮಾರ್ಗದಲ್ಲಿ ಮತ್ತು ಎನ್.ಜೆ.ವೈ ಕೋಡಬಾಳ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆ.16ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗುತ್ತಲ ಪಟ್ಟಣ, ಕಂಚಾರಗಟ್ಟಿ, ಕುರಗುಂದ, ತಿಮ್ಮಾಪುರ, ಭರಡಿ, ಹಾವನೂರ, ಹರಳಹಳ್ಳಿ, ಹಂಸಿ, ಶಾಖಾರ ಮತ್ತು ಬಸಾಪುರ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net