ದೇವಸ್ಥಾನ ವ್ಯವಸ್ಥಾಪನ ಸಮಿತಿ ರಚನೆಗೆ ಅರ್ಜಿ ಆಹ್ವಾನ

Published on

ಹಾವೇರಿ: ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಸಿ ಪ್ರವರ್ಗದ ರಾಣೆಬೆನ್ನೂರ ತಾಲೂಕು ಗುಡಿಹೊನ್ನತ್ತಿ ಗ್ರಾಮದ ಶ್ರೀ ಹೊನ್ನಮ್ಮದೇವಿ ದೇವಸ್ಥಾನಕ್ಕೆ ಒಂಭತ್ತು ಸದಸ್ಯರಿರುವ ವ್ಯವಸ್ಥಾಪನ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಲಾಗಿದೆ.

ದೇವಸ್ಥಾನದ ಸಂಬಂಧದಲ್ಲಿ ಪ್ರಧಾನ ಅರ್ಚಕ ಅಥವಾ ಅರ್ಚಕ ಒಂದು, ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಕನಿಷ್ಠ ಒಬ್ಬ ಸದಸ್ಯ, ಇಬ್ಬರು ಮಹಿಳೆಯರು, ದೇವಸ್ಥಾನ/ಸಂಸ್ಥೆ ಇರುವ ಪ್ರದೇಶದ ಸ್ಥಳೀಯರಲ್ಲಿ ಕನಿಷ್ಠ ಒಬ್ಬರು ಹಾಗೂ ಇತರೆ ನಾಲ್ಕು ಜನರನ್ನೊಳಗೊಂಡ ಸಮಿತಿ ರಚನೆ ಮಾಡಲಾಗುವುದು.

ಆಸಕ್ತರು ಪೊಲೀಸ್ ಸತ್ಯಾಪನಾ ವರದಿ, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಿದ ಅರ್ಜಿಯನ್ನು ಈ ಪ್ರಕಟಣೆಯ 30 ದಿನದೊಳಗಾಗಿ ಹಾವೇರಿ ಜಿಲ್ಲಾಧಿಕಾರಿಯವರ ಕಚೇರಿಗೆ ಸಲ್ಲಿಸಬೇಕು. ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಧಾಮಿರ್ಕ ಪರಿಷತ್ ಅಧ್ಯಕ್ಷ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net