ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ರೆಫ್ರಿಜರೇಟರ್ ಖರೀದಿ; 17,500 ರೂಪಾಯಿ ಕೊಟ್ಟು ಪ್ರೀಡ್ಜ್ ಖರೀದಿಸಿದ ಶಿಗ್ಗಾಂವಿ ಮಹಿಳೆ; ಡಿಸಿಎಂ ಡಿಕೆಶಿ ಟ್ವೀಟ್ :

Gruhalakshmi Fridge
Published on

ಹಾವೇರಿ: ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರು ರೆಫ್ರಿಜರೇಟರ್ ಖರೀದಿಸಿ ಪೂಜೆಗೈದಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಮಹಿಳೆ ಲತಾ ಗೃಹಲಕ್ಷ್ಮೀ ಹಣದಲ್ಲಿ ಪ್ರೀಡ್ಜ್ ಖರೀದಿಸಿದ ಮಹಿಳೆ

ಯುಗಾದಿ ಹಬ್ಬದ ದಿನವೇ ಪ್ರೀಜ್ ಖರೀದಿಸಿದ ಮಹಿಳೆ

17,500 ರೂಪಾಯಿ ಕೊಟ್ಟು ಖರೀದಿಸಿದ ಮಹಿಳೆ

ಗೃಹಲಕ್ಷ್ಮೀ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ ಮಹಿಳೆ

ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದಾಗ, ಯೋಜನೆಯ ಫಲಾನುಭವಿಯಾಗಿದ್ದ ಮಹಿಳೆ

ಯೋಜನೆ ಜಾರಿಯಾದಾಗಿನಿಂದಲೂ ಪ್ರತಿ ತಿಂಗಳು ಬರುತ್ತಿದ್ದ 2,000 ರೂ. ಹಣ ಕೂಡಿಟ್ಟಿದ್ದ ಮಹಿಳೆ

ಫ್ರಿಡ್ಜ್ ಖರೀದಿಸಿದ ಬಳಿಕ ಗೃಹಲಕ್ಷ್ಮೀ ಫಲಾನುಭವಿ ಎಂದು ಫ್ರಿಡ್ಜ್‌ಗೆ ಲಿಖಿತ ಫಲಕ ಹಾಕುವ ಮೂಲಕ‌ ಲತಾ ಸಂತಸ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಿಕೆಶಿ ಟ್ವೀಟ್ :
'ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮೀ ಗ್ಯಾರಂಟಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಸುದ್ದಿ ತಿಳಿದು ಮನಸಿನಲ್ಲಿ ಸಾರ್ಥಕ ಭಾವ ಮೂಡಿದೆ. ಎಷ್ಟೋ ಜನ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಾಯಿಗೆ‌ ಬಂದಂತೆ ಮಾತನಾಡಿದ್ದರು. ನಾವು ಬಡವರ ಮೇಲೆ ರಾಜಕೀಯ ಮಾಡಲ್ಲ. ಬಡವರ ಬದುಕು ಕಟ್ಟುವ ಕೆಲಸ ಮಾಡುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಟ್ವೀಟ್ ಮಾಡಿದ್ದಾರೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net