ಹಾವೇರಿ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ದರ್ಶನಕ್ಕೆ ಜನಸಾಗರ

Dyamavva jatre
Published on

ಹಾವೇರಿ: ಐದು ವರ್ಷಗಳ ಬಳಿಕ ನಡೆಯುತ್ತಿರುವ ಹಾವೇರಿ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ ಜಾತ್ರೆಗೆ ಭಕ್ತರ ದಂಡೇ ಬರುತ್ತಿದೆ. ಭವ್ಯ ಮೆರವಣಿಗೆ ಮೂಲಕ ಬುಧವಾರ ನಸುಕಿನ ಜಾವ ಚೌತಮನಿ ಕಟ್ಟೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಪ್ರಾಥಃ ಕಾಲದಲ್ಲಿ 5 ಗಂಟೆಗೆ ರಂಗ ಹೊಯ್ಯುವುದು, ಉಡಿ ತುಂಬಿಸುವುದು, ಹಣ್ಣು-ಕಾಯಿ ನೈವೇದ್ಯ, ಸಾರ್ವಜನಿಕರಿಂದ ವಿವಿಧ ಸೇವೆ, ಹರಕೆ, ಕಾಣಿಕೆ ಸಮರ್ಪಣೆ ನಡೆಯಿತು. ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಬಸವರಾಜ ಬೆಳವಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ದೇವಿಯ ದರ್ಶನ ಪಡೆದರು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬೆಟ್ಟಪ್ಪ ಕುಳೇನೂರ, ಕಾರ್ಯದರ್ಶಿ ಅಶೋಕ ಮುದಗಲ್ಲ, ಸಿದ್ದು ಪಟವೇಗಾರ, ರಮೇಶ ಕ್ಷೌರದ, ಮಲ್ಲಿಕಾರ್ಜುನಯ್ಯ ವಿಭೂತಿಮಠ, ಪ್ರಥ್ವಿರಾಜ ಬೇಟಗೇರಿ, ಮುರುಗೇಶ ಬಾಲೇಹೊಸೂರು, ಪರಮೇಶ ಪಾಟೀಲ, ಕಿರಣ ಕೊಳ್ಳಿ, ಪ್ರಕಾಶ ಉಜನಿಕೊಪ್ಪ, ಭರತ ದೈವಜ್ಞ, ಪ್ರದೀಪ ದೊಡ್ಡಗೌಡರ, ನಿಖಿಲ್ ಡೊಗ್ಗಳ್ಳಿ, ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net