ಹಾವೇರಿ ಗ್ರಾಮದೇವತೆಗೆ ಬನ್ನಿ ಮುಡಿದ ಭಕ್ತರು

Dyamavva
Published on

ಹಾವೇರಿ: ಇಲ್ಲಿನ ದ್ಯಾಮವ್ವನ ಗುಡಿ ಓಣಿಯಲ್ಲಿರುವ ನಗರದ ಗ್ರಾಮ ದೇವತೆ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ದ್ಯಾಮವ್ವ ದೇವಿ ಹಾಗೂ ಕಾಳಿಕಾ ದೇವಿಗೆ ಭಕ್ತರು ಬನ್ನಿ ಮುಡಿಯುವ ಮೂಲಕ ವಿಜಯದಶಮಿ ಹಬ್ಬ ಆಚರಿಸಿದರು.
ಶ್ರೀ ದ್ಯಾಮವ್ವ ದೇವಿ ಹಾಗೂ ಕಾಳಿಕಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಪಾಲಕಿ ಉತ್ಸವದ ಮೂಲಕ ನಗರದ ಹೊರವಲಯದಲ್ಲಿರುವ ಪೂಜಾ ಸ್ಥಳಕ್ಕೆ ತೆರಳಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸಿದರು.
ಪೃಥ್ವಿರಾಜ ಬೆಟಗೇರಿ, ಬಸವರಾಜ ಹೂಗಾರ, ಅಶೋಕ ಮುದಗಲ್ಲ, ಬೆಟ್ಟಪ್ಪ ಕುಳೇನೂರ, ಅಶೋಕ ಮುದಗಲ್, ಡಾ.ಪ್ರದೀಪ ದೊಡ್ಡಗೌಡರ, ಕಿರಣ ಕೊಳ್ಳಿ, ನಾಗರಾಜ ರಾಜನಾಳಕರ, ಗಿರೀಶ ಕೊಡಿಚಕರ, ಸುರೇಶ ಜೂಜಗಾಂವ, ಸುಭಾಶ್ಚಂದ್ರ ರಾಜನಾಳಕರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net