ಸರ್ಕಾರಿ ಪದವಿಪೂರ್ವ ಕಾಲೇಜ್‌ಗೆ ಶೀಘ್ರದಲ್ಲೇ ಅಗತ್ಯ ಮೂಲಸೌಲಭ್ಯ; ಸಂಜೀವಕುಮಾರ ನೀರಲಗಿ ಭರವಸೆ

17 HVR 6
Published on

ಹಾವೇರಿ: ಇಲ್ಲಿನ ಬಸವೇಶ್ವರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಕಾಲೇಜಿನ ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಿ, ಶಾಸಕರ ಅನುದಾನದಾನದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಮಿತಿಯ ಉಪಾಧ್ಯಕ್ಷ ಸಂಜೀವಕುಮಾರ ನೀರಲಗಿ ಭರವಸೆ ನೀಡಿದರು.
ಇಲ್ಲಿನ ಬಸವೇಶ್ವರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಹಪಠ್ಯ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ದವಾಗಿದೆ. ಶೀಘ್ರದಲ್ಲೇ ಕಾಲೇಜ್‌ಗೆ ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ ಹಾಗೂ ಹೆಚ್ಚುವರಿ ಕಟ್ಟಡದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಅರುಣಕುಮಾರ ಪಿ.ಜೆ. ಹಾಗೂ ಎನ್‌ಎಸ್‌ಎಸ್ ಬೆಳಗಾವಿ ವಿಭಾಗದ ಅಧಿಕಾರಿ ರವಿಕುಮಾರ ಅಂಬೋರೆ ಮಾತನಾಡಿದರು.
ಅಭಿವೃದ್ಧಿ ಸಮಿತಿ ಸದಸ್ಯರಾದ ಮಂಜುನಾಥ ಸಣ್ಣಯಲ್ಲಪ್ಪನವರ, ಆಸೀಫ್ ಆಡೂರು, ರಾಘವೇಂದ್ರ ವಡ್ಡರ, ಶಿವರಾಜ ಪಾಟೀಲ, ತೌಸೀಫ್ ದೊಡ್ಡಮನಿ, ಶಿವಬಸವ ಹಲಗಣ್ಣನವರ, ವೈಶಾಲಿ ಕರಸಿದ್ದಿದೇವರಮಠ, ಸಂಜನಾ ಮೋರೆ, ಸುಭಾಸ ಹುಲ್ಯಾಳ, ರಾಜು ಡೊಳ್ಳಿನ, ನಿಂಗಪ್ಪ ಚಾವಡಿ, ಅಬ್ದುಲ್‌ಖಾದರ್ ಆಡೂರ, ಮೆಹಬೂಬಿ ದೊಡ್ಡಮನಿ, ಪಿ.ಬಿ.ಬಾರಕೇರ, ಉಪನ್ಯಾಸಕರು, ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net