ಗೌರಿಮಠದ ಶ್ರೀ ಮಲ್ಲಿಕಾರ್ಜುನ ಶಾಲೆಯಲ್ಲಿ ಕಲಿಕಾ ಪ್ರೋತ್ಸಾಹ ಕಾರ್ಯಕ್ರಮ

13 HVR 6
Published on

ಹಾವೇರಿ: ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ-ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಸೋಮವಾರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಜ್ಞ ಶಿಕ್ಷಕರಿಂದ ವಿಶೇಷ ಕಲಿಕಾ ಪ್ರೋತ್ಸಾಹ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸಾನ್ನಿಧ್ಯ ವಹಿಸಿದ್ದ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶೇಷ ಅನುಭವ, ಜ್ಞಾನ ಹೊಂದಿದ ಶಿಕ್ಷಕರ ಬೋಧನಾ ಕೌಶಲವನ್ನು ಮಕ್ಕಳು ಸರಿಯಾಗಿ ಅರ್ಥೈಸಿಕೊಂಡು ಹೆಚ್ಚಿನ ಅಂಕ ಪಡೆದುಕೊಳ್ಳಬೇಕು. ಜತೆಗೆ ಜ್ಞಾನವಂತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಂಡು ಶಾಲೆಗೆ, ಪಾಲಕರಿಗೆ ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಕ ಗೋವಿಂದರಾಯ ಎಚ್.ಕೆ. ಸಮಾಜ ವಿಜ್ಞಾನ, ಪಿ.ಬಿ.ಮುದ್ದಿ ಹಾಗೂ ಎಂ.ಜಿ.ಹಿರೇಮಠ ವಿಜ್ಞಾನ ಹಾಗೂ ಗಣಿತ ವಿಷಯ, ವಾಸುದೇವ ಅವರು ಇಂಗ್ಲಿಷ್ ಮತ್ತು ಶಿವಾನಂದ ಹಂಜಿ ಶಿಕ್ಷಕರು ಕನ್ನಡ ವಿಷಯದ ಕುರಿತು ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ವಿಮರ್ಶಾತ್ಮಕವಾಗಿ ಬೋಧಿಸಿದರು. ಶ್ರೀಗಳು ಎಲ್ಲ ಶಿಕ್ಷಕರನ್ನು ಸನ್ಮಾನಿಸಿದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗಂಗಯ್ಯ ಕುಲಕರ್ಣಿ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ನಿರೂಪಿಸಿದರು. ಶಿಕ್ಷಕಿ ಸರಸ್ವತಿ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net