

ಹಾವೇರಿ: ವಿಶ್ವಕ್ಕೆ ಯೋಗದ ಬಗ್ಗೆ ಪರಿಚಯಿಸಿದ ದೇಶ ನಮ್ಮ ಹೆಮ್ಮೆಯ ಭಾರತ ದೇಶವಾಗಿದೆ ಎಂದು ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪತಂಜಲಿ ಮಹರ್ಷಿಗಳು ಹಿಂದಿನ ಕಾಲದಲ್ಲಿ ಯೋಗವನ್ನು ಮಾಡುತ್ತಿದ್ದರು. ಸೂರ್ಯನಿಗೆ ನಮನ ಸರ್ವ ರೋಗಗಳ ಶಮನ, ಯೋಗ ನಡಿಗೆ ಆರೋಗ್ಯದ ಕಡೆಗೆ, ಯೋಗ ಮಾಡಿದರೆ ಓದಡುವುದು ರೋಗ. ಇದು ದೇಹದ ಎಲ್ಲ ಬಾಗಗಳನ್ನು ಗಟ್ಟಿಯಾಗುವಂತೆ ಮಾಡುತ್ತದೆ. ಯೋಗವು ಮನಸಿನ ಅಲೆಗಳನ್ನು ನಿಲ್ಲಿಸುವುದರ ಮೂಲಕ ಮಾನಸಿಕ ಮತ್ತು ದೈಹಿಕ ಅರೋಗ್ಯ ಕಾಪಾಡುತ್ತದೆ ಎಂದರು.
ಶ್ರೀಗಳು ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಪದ್ಮಾಸನ, ವಜ್ರಾಸನ, ವೃಶ್ಚಿಕಾಸನ, ಪ್ರಾಣಾಯಾಮ, ಇತರ ಯೋಗಾಸನದ ವಿವಿಧ ಆಸನಗಳನ್ನು ತಿಳಿಸಿಕೊಟ್ಟರು.