ಯೋಧರು- ಶಿಕ್ಷಕರ ಸೇವೆ ಪವಿತ್ರವಾದದ್ದು; ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

6 HVR 11
Published on

ಹಾವೇರಿ: ದೇಶ ರಕ್ಷಣೆ ಮಾಡುವ ಯೋಧರು ಮತ್ತು ಅಕ್ಷರ ಕಲಿಸುವ ಶಿಕ್ಷಕರ ಸೇವೆ ಅತ್ಯಂತ ಪವಿತ್ರವಾದದ್ದು, ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ -ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವೇ ಆಚರಿಸುವ ಶಿಕ್ಷಕರ ದಿನಾಚರಣೆಯ ಮಹತ್ವ ತಿಳಿಸಿದರು.

ವಿದ್ಯಾರ್ಥಿಗಳು ಎಲ್ಲ ಶಿಕ್ಷಕರು ಮತ್ತು ಶಿಕ್ಷಕಿಯರಿಗೆ ಸನ್ಮಾನಿಸಿ ಪ್ರೀತಿಯ ಸವಿನೆನಪಿನ ಕಾಣಿಕೆ ವಿತರಿಸಿದರು.

ವಿದ್ಯಾಶ್ರೀ ಗುಮಕರ ಸ್ವಾಗತಿಸಿದರು. ದಾನೇಶ್ವರಿ ಹಿರೇಮಠ ವಂದಿಸಿದರು. ಭವಾನಿ ಹಿರೇಮಠ ನಿರೂಪಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net