ಹೇರ್ ಕಲರಿಂಗ್ ಮಾಡಿಸಿ ಖುಷಿಪಟ್ಟ ಜನ; ಮೊದಲ ದಿನವೇ ಹೇರ್ ಕಲರಿಂಗ್ ಮಾಡಿಸಿಕೊಂಡ 126 ಜನ

5 HVR 1 A
Published on

ಹಾವೇರಿ: ನಗರದಲ್ಲಿ ‘ವಿಜಯವಾಣಿ’ ಸಹಯೋಗದಲ್ಲಿ ಸೋಮವಾರದಿಂದ ಆರಂಭವಾಗಿರುವ ಎರಡು ದಿನಗಳ ‘ಉಚಿತ ಹೇರ್ ಕಲರಿಂಗ್ ಅಭಿಯಾನ’ಕ್ಕೆ ಭಾರಿ ಜನಬೆಂಬಲ ವ್ಯಕ್ತವಾಯಿತು. ಮೊದಲ ದಿನವೇ 126 ಜನರು ಅಭಿಯಾನದಲ್ಲಿ ಪಾಲ್ಗೊಂಡು ತಮಗಿಷ್ಟವಾದ ಹೇರ್ ಕಲರಿಂಗ್ ಮಾಡಿಸಿಕೊಂಡು ಸಂತಸಪಟ್ಟರು.
ನಗರದ ಗುರುಭವನ ಪಕ್ಕದ ಮಳಿಗೆಯಲ್ಲಿ ಆಯೋಜಿಸಿದ್ದ ಅಭಿಯಾನಕ್ಕೆ ಹಾವೇರಿ ನಗರಸಭೆ ಕಂದಾಯ ಅಧಿಕಾರಿ ದುಗ್ಗೇಶ ಬಿ.ಎಂ. ಚಾಲನೆ ನೀಡಿದರು. ನಗರದ ಪುರುಷರು, ಮಹಿಳೆಯರು, ಯುವಕ, ಯುವತಿಯರು, ನಗರದ ವಿವಿಧ ಬ್ಯೂಟಿ ಪಾರ್ಲರ್‌ಗಳು, ಹೇರ್ ಕಟಿಂಗ್ ಶಾಪ್‌ಗಳ ಮಾಲೀಕರು, ಸಿಬ್ಬಂದಿ ಅಭಿಯಾನದಲ್ಲಿ ಪಾಲ್ಗೊಂಡರು.
ಸಂಜೆವರೆಗೂ ನಡೆ ಅಭಿಯಾನದಲ್ಲಿ 126 ಪುರುಷರು, ಮಹಿಳೆಯರು ಭಾಗವಹಿಸಿ, ಗಾರ್ನಿಯರ್ ಕಂಪನಿಯ ಕಪ್ಪು, ಕೆಂಪು, ಕಡುಗಪ್ಪು, ಮತ್ತಿತರ ಬಣ್ಣ ಹಚ್ಚಿಸಿಕೊಂಡು, ಕನ್ನಡಿ ಹಾಗೂ ಸೆಲ್ಫೀ ಸ್ಟಾೃಂಡ್ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.
ಅಭಿಯಾನದಲ್ಲಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ದೊಡ್ಡಮನಿ, ಹಡಪದ ಅಪ್ಪಣ್ಣ ಸಮಾಜ ವೃತ್ತಿಬಾಂಧವ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹಡಪದ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಕ್ಷೌರದ, ನಗರಸಭೆ ಮಾಜಿ ಸದಸ್ಯ ಕರಬಸಪ್ಪ ಹಳದೂರ, ಜಗದೀಶ ಅಜ್ಜಣ್ಣನವರ, ಅನ್ನಪೂರ್ಣ ಹತ್ತಿ, ಅಶ್ವಿನಿ ಕೋಡದ, ಕುಮಾರ ಹತ್ತಿ, ಉಮೇಶ ಬಡಿಗೇರ, ಬ್ಯೂಟಿ ಪಾರ್ಲರ್‌ಗಳ ಮಾಲೀಕರು, ಸಿಬ್ಬಂದಿ, ಸಾರ್ವಜನಿಕರು, ಮತ್ತಿತರರು ಪಾಲ್ಗೊಂಡಿದ್ದರು.
ಆ.6ರಂದು ನಡೆಯಲಿದೆ
ಹಾವೇರಿಯ ಗುರುಭವನ ಪಕ್ಕದ ಮಳಿಗೆಯಲ್ಲಿ ಆರಂಭವಾಗಿರುವ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನ ಆ.6ರಂದು ಮುಂದುವರಿಯಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕಂಪನಿಯ ಸಿಬ್ಬಂದಿ ಪುರುಷರು ಹಾಗೂ ಮಹಿಳೆಯರ ಕೂದಲಿಗೆ ಉಚಿತವಾಗಿ ಬಣ್ಣ ಹಚ್ಚಲಿದ್ದಾರೆ. ಆಸಕ್ತರು ಇದರ ಪ್ರಯೋಜನ ಪಡೆಯಬಹುದು ಎಂದು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net