ಗಂಗೆಬಾವಿಯಲ್ಲಿ ಸಿಎಂ ನೇತೃತ್ವದಲ್ಲಿ ಕುರುಬರ ಸಮುದಾಯದ ಗೌಪ್ಯ ಸಭೆ

Published on

ಹಾವೇರಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕುರುಬರ ಸಮುದಾಯದ ಮತಗಳನ್ನು ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರಗಾರಿಕೆ ರೂಪಿಸಿದ್ದು, ಶಿಗ್ಗಾಂವಿ ತಾಲೂಕು ಗಂಗೆಬಾವಿ ರೆಸಾರ್ಟ್‌ನಲ್ಲಿ ಮಂಗಳವಾರ ಕುರುಬ ಸಮುದಾಯದ ಮುಖಂಡರ ಗೌಪ್ಯ ಸಭೆ ನಡೆಸಿದರು.

ಚಂದಾಪುರ ಪ್ರಚಾರ ಸಭೆಗೂ ಮುನ್ನ ಗಂಗೆಬಾವಿಯ ಯಲಿಗಾರ ರೆಸಾರ್ಟ್‌ನಲ್ಲಿ ಕುರುಬ ಸಮಾಜದ ಮುಖಂಡರ ಸಭೆ ನಡೆಸಿದರು. ಉಪಚುನಾವಣೆಯಲ್ಲಿ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಬರುವಂತೆ ನೋಡಿಕೊಳ್ಳಿ. ಬಿಜೆಪಿಗರ ಮಾತಿಗೆ ಮರುಳಾಗದಿರಿ ಎಂದು ಕರೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಕೇಸ್ ಆದರೆ ಆಗಲಿ ಬಿಡು

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೇಲೆ ಎಫ್‌ಐಆರ್ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆದ ಸಿಎಂ, ಕುಮಾರಸ್ವಾಮಿ ಮೇಲೆ ಕೇಸ್ ಆದರೆ ನಾನು ಮಾತನಾಡಬೇಕಾ ? ನೀವು ಹೇಳಿದಕ್ಕೆ ನಾನು ಹೇಳಬೇಕಾ ? ಇಲ್ಲಿ ಏನೂ ಹೇಳಲ್ಲಯ್ಯ ನಾನು. ಕೇಸ್ ಆದರೆ ಆಗಲಿ ಬಿಡು ಎಂದು ಸಿಎಂ ಹೊರಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net