ಗಣೇಶ ಮೂರ್ತಿ ವಿಸರ್ಜನೆಗೆ ಸಂಚಾರಿ ವಾಹನ ವ್ಯವಸ್ಥೆ

16 HVR 2 D
Published on

ಹಾವೇರಿ: ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಸೆ.18 ಮತ್ತು 22ರಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದ ಆಯ್ದ ಪ್ರದೇಶಗಳಲ್ಲಿ ಸಂಚಾರಿ ವಿಸರ್ಜನಾ ವಾಹನದ ವ್ಯವಸ್ಥೆ ಮಾಡಲಾಗಿದೆ.
ಗಣೇಶ ಮೂರ್ತಿಗಳನ್ನು ವಿವಿಧ ಜಲಮೂಲಗಳಲ್ಲಿ ವಿಸರ್ಜಸಿ ಅಲ್ಲಿನ ಪರಿಸರ ಹಾಗೂ ಜಲಮೂಲಗಳನ್ನು ಅಶುದ್ಧಗೊಳಿಸುವ ಪ್ರಕ್ರಿಯೆ ತಡೆಗಟ್ಟಲು ಹಾಗೂ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಂಚಾರಿ ಗಣೇಶನ ಮೂರ್ತಿ ವಿಸರ್ಜನಾ ವಾಹನದ ವ್ಯವಸ್ಥೆ ಮಾಡಲಾಗಿದೆ.
ಸೆ.18 ಮತ್ತು 22ರಂದು ಸಂಜೆ 6ರಿಂದ 8.30ರವರೆಗೆ ಪಿ.ಡಬ್ಲ್ಯೂ.ಡಿ. ಕ್ವಾರ್ಟರ್ಸ್ ಹಾಗೂ ರಾತ್ರಿ 8.45ರಿಂದ 10 ಗಂಟೆವರೆಗೆ ಪುರದ ಓಣಿ ಮತ್ತು ಯಾಲಕ್ಕಿ ಓಣಿಯಲ್ಲಿ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಈ ವಾಹನದಲ್ಲಿ ಗಣೇಶನ ವಿಸರ್ಜನೆ ಮಾಡಬೇಕು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸುಧಾ ಸೌಮ್ಯಲತಾ ಎಂ.ಕೆ. ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net