ಗಾಂಧೀ ತತ್ವ ಸಂದೇಶ ಸಾರಿದ ‘ದಾರಿ ಯಾವುದಯ್ಯ’

3 HVR 2
Published on

ಹಾವೇರಿ: ಅಹಿಂಸೆಯ ದಾರಿಗಳೆಲ್ಲ ಮುಚ್ಚಿ ಹಿಂಸೆಯ ಹೆದ್ದಾರಿಗಳು ನಿರ್ಮಾಣವಾಗುತ್ತಿವೆ. ನಮ್ಮ ದಾರಿ ಯಾವುದು, ಹಿಂಸೆಯೋ, ಅಹಿಂಸೆಯೋ ? ಸತ್ಯವೋ, ಅಸತ್ಯವೋ ? ನ್ಯಾಯವೋ, ಅನ್ಯಾವೋ ? ಹೀಗೆ ಪ್ರಶ್ನಿಸುವ ‘ದಾರಿ ಯಾವುದಯ್ಯ’ ಎಂಬ ಏಕವ್ಯಕ್ತಿ ನಾಟಕದ ಮೂಲಕ ಶಂಕರ ತುಮ್ಮಣ್ಣನವರ ತಮ್ಮ ಅಭಿನಯದ ಮೂಲಕ ಗಾಂಧಿ ತತ್ವಗಳ ಸಂದೇಶವನ್ನು ಸಾರಿದರು.

ಇಲ್ಲಿಯ ಗಾಂಧಿ ವೃತ್ತದಲ್ಲಿ ಹುತಾತ್ಮ ದಿನಾಚರಣೆ ಅಂಗವಾಗಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಸಾಹಿತಿ ಕಲಾವಿದರ ಬಳಗ, ಎಸ್‌ಎಫ್‌ಐ ಸಂಘಟನೆ ಸಹಯೋಗದಲಲಿ ದಾರಿ ಯಾವುದಯ್ಯ ನಾಟಕ ಪ್ರದರ್ಶನ ನಡೆಯಿತು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ ರಚನೆಯ ನಾಟಕವನ್ನು ತಮ್ಮ ಮನೋಜ್ಞ ಅಭಿನಯದ ಮೂಲಕ ಶಂಕರ ತುಮ್ಮಣ್ಣನವರ ಜನರಿಗೆ ಮನಮುಟ್ಟುವಂತೆ ವಿವರಿಸಿದರು.

ಏಕವ್ಯಕ್ತಿ ಕಿರು ನಾಟಕದಲ್ಲಿ ಭಗತ್‌ಸಿಂಗ್, ಮೈಲಾರ ಮಹಾದೇವದ ತ್ಯಾಗ ಬಲಿದಾನಗಳ ಕಥಾನಕವನ್ನು ಒಳಗೊಂಡಿತ್ತು. ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಕುರಿತು ನಾಡಿನ ಹಿರಿಕಿರಿ ಕವಿಗಳಾದ ಚನ್ನವೀರ ಕಣವಿ, ಡಿ.ಎಸ್. ಕರ್ಕಿ, ಯು.ಆರ್ ಅನಂತಮೂರ್ತಿ, ಗಾಯತ್ರಿ ರವಿ, ಸೋಮನಾಥ ಡಿ, ಎಸ್.ಆರ್ ನಾಗನೂರ ಮುಂತಾದವರ ಕವಿತೆಗಳನ್ನು ರೇಣುಕಾ ಗುಡಿಮನಿ, ಬಸವರಾಜ ಪೂಜಾರ, ಧನುಸ್, ಶಶಿಕಲಾ, ಜುಬೇದಾ ನಾಯಕ್ ಮುಂತಾದವರು ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net