ಕ್ರಾಂತಿಕಾರಿ ಗಾಯಕ ಗದ್ದರ್‌ಗೆ ಶೃದ್ಧಾಂಜಲಿ

7 HVR 5
Published on

ಹಾವೇರಿ: ತೆಲುಗು ಭಾಷೆಯ ಕ್ರಾಂತಿಕಾರಿ ಗಾಯಕರೆಂದೇ ಪ್ರಸಿದ್ಧಿ ಪಡೆದಿದ್ದ ಗದ್ದರ್ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ವಿವಿಧ ದಲಿತ ಸಂಘಟನೆಗಳಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು. ಗದ್ದರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ, ಮೌನ ಆಚರಿಸಲಾಯಿತು. ಬಳಿಕ ಕ್ರಾಂತಿ ಗೀತೆಗಳನ್ನು ಹಾಡಲಾಯಿತು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಜನರ ಸಮರ ನೌಕೆ ಎಂದೇ ಖ್ಯಾತಿ ಪಡೆದಿದ್ದ ಗದ್ದರ್ ಮೂಲ ಹೆಸರು ಗುಮ್ಮಡಿ ವಿಠ್ಠಲ ರಾವ್. ತಮ್ಮ ಕಂಚಿನ ಕಂಠದ ಮೂಲಕ ಹೋರಾಟದ ಹಾಡುಗಳಿಂದ ಸಮ ಸಮಾಜದ ನಿರ್ಮಾಣಕ್ಕಾಗಿ ನಡೆದ ಹೋರಾಟಗಳಿಗೆ ಅವರು ಜೀವ ತುಂಬಿದ್ದರು. ಬುರ‌್ರ ಕಥೆಗಳ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಎಂದರು.
ದಲಿತರ, ಬಡವರ ಕಷ್ಟಗಳನ್ನು ಹಾಡು ಮತ್ತು ನಾಟಕಗಳ ರೂಪದಲ್ಲಿ ಕಟ್ಟಿ ತಿಳಿಸುವ ಪ್ರಯತ್ನ ಮಾಡುತ್ತಿದ್ದರು. ಗದ್ದರ ಅವರ ನಿಧನ ಹೋರಾಟಗಾರಲ್ಲಿ ತಲ್ಲಣ ಉಂಟುಮಾಡಿದೆ ಎಂದರು.
ಡಿವೈಎಫ್‌ವೈ ಕಾರ್ಯದರ್ಶಿ ಬಸವರಾಜ ಪೂಜಾರ, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಎನ್.ಎಂ. ಗಾಳೆಮ್ಮನವರ, ಉಡಚಪ್ಪ ಮಾಳಗಿ, ಹೊನ್ನಪ್ಪ ತಗಡಿನಮನಿ, ಸಂಜಗಾಂಧಿ ಸಂಜೀವಣ್ಣನವರ, ರಮೇಶ ಜಾಲಿಹಾಳ, ಶೆಟ್ಟಿ ವಿಭೂತಿ, ಬಸವರಾಜ ಭೋವಿ, ಹಸೀನಾ ಹೆಡಿಯಾಲ, ಅಕ್ಷತಾ ಕೆ.ಸಿ., ಮುತ್ತುರಾಜ ಮಾದರ, ಗುಡ್ಡಪ್ಪ ಬಣಕಾರ, ಸೋಮಣ್ಣ ಕೂಡಲಗಿ, ವಿನಾಯಕ ಗೋಸಂಗಿ, ನಿಂಗಪ್ಪ ಗಾಳೆಮ್ಮನವರ, ಮಾಲತೇಶ ಅಂಗೂರ, ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net