ಮೊಬೈಲ್ ರಿಪೇರಿ, ಸರ್ವಿಸ್ ತರಬೇತಿ ಶಿಬಿರ

Mobiel repair
Published on

ಹಾವೇರಿ: ದೇವಗಿರಿ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ವಿಬ್‌ಸೆಟಿಯಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ನವೆಂಬರ್ 20ರಿಂದ ಡಿಸೆಂಬರ್ 19ರವರೆಗೆ 30 ದಿನಗಳ ಉಚಿತ ಮೊಬೈಲ್ ರಿಪೇರ್ ಮತ್ತು ಸರ್ವಿಸ್ ತರಬೇತಿ ಶಿಬಿರ ಆಯೋಜಿಸಲಾಗಿದೆ.
ತರಬೇತಿ ಜತೆಗೆ ಊಟ, ವಸತಿ ಉಚಿತವಾಗಿದೆ. ಮೊಬೈಲ್‌ನ ವಿಧಗಳು, ಡುಯೆಲ್ ಸಿಮ್, ಹ್ಯಾಂಡ್‌ಸೇಟ್, ಸ್ಮಾರ್ಟ್ ಫೋನ್‌ಗಳ ನೆಟ್‌ವರ್ಕ್ ಮಾಹಿತಿ, ಮೊಬೈಲ್ ಬಿಡಿಭಾಗಗಳ ಮಾಹಿತಿ, ರಚನೆಯ ಮಾಹಿತಿ ಜತೆಗೆ ಚಾರ್ಜಿಂಗ್ ಸಮಸ್ಯೆ, ಬ್ಯಾಟರಿ ಸಮಸ್ಯೆ, ಡಿಸ್‌ಪ್ಲೇ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆ ಇತ್ಯಾದಿ ವಿಷಯಗಳನ್ನು ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳು 18ರಿಂದ 45 ವರ್ಷದೊಳಗಿರಬೇಕು. ಜಾತಿ ಮತ್ತು ಆದಾಯ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ರೇಶನ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರದ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವಿಜಯ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ದೇವಗಿರಿ, ಹಾವೇರಿ, ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net