ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ 10ರವರೆಗೆ ಮಾತ್ರ

Published on

ಹಾವೇರಿ: ಒಂದನೇ ತರಗತಿಯಿಂದ 12ನೇ (ಪಿ.ಯು.ಸಿ) ತರಗತಿವರೆಗಿನ ವಿದ್ಯಾರ್ಥಿಗಳು 2023-24ನೇ ಸಾಲಿನ ಸಂಸ್ಥೆಯ ಬಸ್ ಪಾಸ್ ಪಡೆಯಲು ಸೇವಾ ಸಿಂಧು ಮುಖಾಂತರ ಸಲ್ಲಿಸಲಾದ ಅರ್ಜಿ ಸ್ವೀಕೃತಿ ಹಾಗೂ ಪೋಟೋ ಹೊಂದಿರುವ ಯಾವುದಾದರೂ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ನಿಗದಿತ ಮಾರ್ಗದ ನಿರ್ದಿಷ್ಟ ಸೇವೆಯಲ್ಲಿ ಜು.10ರವರೆಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಹಿಳಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸಿರುವ ಪೋಟೋ ಹೊಂದಿರುವ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಿ ಶಕ್ತಿ ಯೋಜನೆಯಡಿ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸಲು ಅನುಮತಿಸಲಾಗಿದೆ ಎಂದು ವಾಕರಸಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net